ETV Bharat / state

ಆಳಂದದಲ್ಲಿ ಎರಡು ಕೋಮುಗಳ ಮಧ್ಯೆ ಘರ್ಷಣೆ: 10 ಮಂದಿ ಮಹಿಳೆಯರು ಸೇರಿ 167 ಜನ ಅರೆಸ್ಟ್​ - ಆಳಂದ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ

ಆಳಂದದಲ್ಲಿ ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ರಾತ್ರೋರಾತ್ರಿ ನಮ್ಮ ಮನೆಗಳಿಗೆ ನುಗ್ಗಿ ನಮ್ಮ ಮನೆಯವರನ್ನು ಸುಖಾ ಸುಮ್ಮನೆ ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಪೊಲೀಸ್​ ಹೊಡೆತದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ದೂರುತ್ತಿದ್ದಾರೆ. ಇದೆಲ್ಲಾ ಸುಳ್ಳು, ವಯೋಸಹಜ ಕಾಯಿಲೆಯಿಂದ ಮರಣ ಹೊಂದಿರುವುದು ದೃಢವಾಗಿದೆ. ಮಾರ್ಚ್ 5ರ ವರೆಗೆ ಆಳಂದ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಯಲ್ಲಿರಲಿದೆ ಎಂದು ಆಳಂದ ಘಟನೆ ಕುರಿತು ಎಸ್​ಪಿ ಇಶಾ ಪಂತ್​ ಹೇಳಿದ್ದಾರೆ.

ishsa panth
ಎಸ್​ಪಿ ಇಶಾ ಪಂತ್
author img

By

Published : Mar 2, 2022, 7:21 PM IST

Updated : Mar 2, 2022, 7:56 PM IST

ಕಲಬುರಗಿ: ಆಳಂದ ಪಟ್ಟಣದ ಪ್ರಾರ್ಥನಾ ಸ್ಥಳವೊಂದರಲ್ಲಿ ತಲವಾರ್ ಝಳಪಿಸಿ, ಕಲ್ಲು ಬಡಿಗೆಗೆಗಳಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲ್ಲು ತೂರಾಟದಲ್ಲಿ ಕೇಂದ್ರ ಸಚಿವ ಭಗವಂತ ಖುಬಾ, ಕಲಬುರಗಿ ಜಿಲ್ಲೆಯ ಕೆಲ ಬಿಜೆಪಿ ಶಾಸಕರ ಕಾರುಗಳು ಜಖಂಗೊಂಡಿದ್ದವು. ಅಷ್ಟೇ ಅಲ್ಲದೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಮತ್ತು ಎಸ್ ಪಿ ಇಶಾ ಪಂತ್ ಕಾರು ಕೂಡ ಡ್ಯಾಮೇಜ್ ಆಗಿತ್ತು. ಕಲ್ಲು ತೂರಾಟ ಆಗುತ್ತಿದ್ದಂತೆ ಲಾಠಿ ಚಾರ್ಜ್ ಮಾಡಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಬಳಿಕ ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಎಫ್​ಐಆರ್​ಗಳನ್ನು ದಾಖಲಿಸಿದ್ದಾರೆ.

167 ಜನರ ಬಂಧನ.. ಐದು ಎಫ್​ಐಆರ್​ ಸಂಬಂಧ ಫೀಲ್ಡಿಗಿಳಿದ ಪೊಲೀಸರು ಸುಮಾರು 167 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 10 ಜನ ಮಹಿಳೆಯರು ಕೂಡ ಇದ್ದಾರೆ.

ಪೂರ್ವನಿಯೋಜಿತ ಕೃತ್ಯ.. ಆಳಂದ ಪಟ್ಟಣದಲ್ಲಿ ಇಂದು ಕೂಡ ಪೊಲೀಸ್ ಬಿಗಿ ಭದ್ರತೆಯನ್ನ ನಿಯೋಜನೆ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಲ್ಲು ತೂರಾಟ ಮತ್ತು ಗಲಾಟೆ ಪೂರ್ವನಿಯೋಜಿತ ಕೃತ್ಯದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು‌. ಗುಪ್ತಚರ ಇಲಾಖೆ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಾದಿತ ಸ್ಥಳದ ಅಕ್ಕ ಪಕ್ಕದ ಮನೆ‌ ಮೇಲೆ ಜಮಾವಣೆಗೊಂಡ ಕಲ್ಲು ಬಂಡಿಗೆಗಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಹಲ್ಲೆಯಿಂದ ಮಹಿಳೆ ಸಾವನ್ನಪ್ಪಿಲ್ಲ.. ಇನ್ನೂ ನಿನ್ನೆಯ ಘಟನೆಯ ಬಳಿಕ ಪೊಲೀಸರು ರಾತ್ರೋರಾತ್ರಿ ನಮ್ಮ ಮನೆಗಳಿಗೆ ನುಗ್ಗಿ ನಮ್ಮ ಮನೆಯವರನ್ನು ಸುಖಾ ಸುಮ್ಮನೆ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಅಂತಾ ಮತ್ತೊಂದು ಸಮುದಾಯದ ಮಹಿಳೆಯರು ಆರೋಪ ಮಾಡೋದಕ್ಕೆ ಮುಂದಾಗಿದ್ದಾರೆ. ಮಂಗಳವಾರ ಮನೆಯವರೆಲ್ಲರು ಕೆಲಸಕ್ಕೆ ಹೋಗಿ ರಾತ್ರಿ ವಾಪಸ್ ಆಗಿದ್ದರು. ಮನೆಯಲ್ಲಿ ಮಲಗಿದ್ದವರ ಮೇಲೆ ಹಲ್ಲೆ ಮಾಡಿ ಪೊಲೀಸರು ಬಂಧಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಅದಾದ ಬಳಿಕ ಒಬ್ಬ ವಯೋವೃದ್ಧ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಅಂತಾ ಆರೋಪಿಸಿದ್ದಾರೆ.

ಆದರೆ ಸ್ಥಳೀಯರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ, 83 ವರ್ಷದ ವಯೋವೃದ್ಧ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಮಹಿಳೆಯು ಬೇರೆ ಕಾರಣದಿಂದ ಸಾವನ್ನಪ್ಪಿದ್ದಾರೆ. ಆದರೆ ಅದನ್ನ ಪೊಲೀಸರು ಹೊಡೆತದಿಂದ ಸಾವನ್ನಪ್ಪಿದ್ದಾರೆ ಅಂತಾ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ಎಸ್​ಪಿ ಹೇಳಿದರು.

ಎರಡು ಕೋಮುಗಳ ಮದ್ಯೆ ಘರ್ಷಣೆ: 167 ಜನರ ಬಂಧನ

ಆಳಂದ ಪಟ್ಟಣ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಪಟ್ಟಣ ಪೊಲೀಸರ ಸುಪರ್ದಿಯಲ್ಲಿದೆ. ಮಾರ್ಚ್ 5ರವರೆಗೆ ಆಳಂದ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ‌. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಸ್​ಪಿ ಇಶಾ ಪಂತ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆರ್​​ಟಿಇ ಸೀಟುಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ: ಪರಿಷ್ಕೃತ ವೇಳಾಪಟ್ಟಿ ಹೀಗಿದೆ..

Last Updated : Mar 2, 2022, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.