ಕಲಬುರಗಿ: ಜಿಲ್ಲೆಯಲ್ಲಿ ಹೆಮ್ಮಾರಿ ಕೊರೊನಾ ಮತ್ತೆ ತನ್ನ ಅಟ್ಟಹಾಸ ಮುಂದುವರೆಸಿದೆ. ಇಂದು ಮತ್ತೆ 15 ಜನರಿಗೆ ಕೊರೊನಾ ಸೊಂಕು ಧೃಡಪಟ್ಟಿದೆ.
2 ಮಕ್ಕಳು, 3 ಮಹಿಳೆಯರು ಮತ್ತು 10 ಪುರುಷರಲ್ಲಿ ಸೊಂಕು ಕಾಣಿಸಿಕೊಂಡಿದೆ. ಸೋಂಕಿತರ ಸಂಖ್ಯೆ 1,436ಕ್ಕೆ ಏರಿಕೆಯಾಗಿದೆ. ಇಂದು 47 ಜನ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದವರ ಸಂಖ್ಯೆ 1,095ಕ್ಕೆ ತಲುಪಿದೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 323 ಸಕ್ರಿಯ ಪ್ರಕರಣಗಳಿವೆ.