ETV Bharat / state

ಕಲಬುರಗಿ ಕೈದಿ ಪರಾರಿ ಪ್ರಕರಣ: ಮೂವರು ಪೊಲೀಸ್ ಸಿಬ್ಬಂದಿ ಅಮಾನತು!

ಜಿಲ್ಲಾಸ್ಪತ್ರೆಯಿಂದ ವಿಚಾರಣಾಧೀನ ಕೈದಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಆರೋಪದ ಮೇಲೆ ನಗರ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಕೈದಿ ಪರಾರಿ ಪ್ರಕರಣ
ಕಲಬುರಗಿ ಕೈದಿ ಪರಾರಿ ಪ್ರಕರಣ
author img

By

Published : Feb 18, 2020, 5:42 PM IST

ಕಲಬುರಗಿ: ವಿಚಾರಣಾಧೀನ ಕೈದಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಸಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಮಡಿವಾಳಪ್ಪ, ವೀರಭದ್ರಯ್ಯ ಹಾಗೂ ಗೌಡಪ್ಪ ಅಮಾನತುಗೊಂಡ ಪೊಲೀಸ್​ ಸಿಬ್ಬಂದಿ. ಕರ್ತವ್ಯ ಲೋಪ ಆರೋಪದ ಮೇಲೆ ನಗರ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ ಮೂವರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಳ್ಳತನ ಆರೋಪ ಹೊತ್ತಿದ್ದ ಅಂತರರಾಜ್ಯ ಕುಖ್ಯಾತ ಕಳ್ಳ ಮುಜೀಬ್ (25) ಅನಾರೋಗ್ಯದ ಹಿನ್ನೆಲೆ ಮೂರು ದಿನಗಳಿಂದ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ ಪೊಲೀಸರ ಕಣ್ಣುತಪ್ಪಿಸಿ ಜಿಲ್ಲಾಸ್ಪತ್ರೆಯ ವಾರ್ಡ್​ನಿಂದ ತಲೆ ಮರೆಸಿಕೊಂಡಿದ್ದಾನೆ. ಕರ್ತವ್ಯ ನಿಯೋಜಿತ ಪೊಲೀಸ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂಬ ಕಾರಣದಿಂದ ಮೂವರನ್ನೂ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬ್ರಹ್ಮಪೂರ ಠಾಣೆಯಲ್ಲಿ ಪರಾರಿಯಾದ ಕೈದಿ ಮುಜೀಬ್ ವಿರುದ್ಧ ಪ್ರಕರಣ ದಾಖಲಾಗಿದೆ. ತಪ್ಪಿಸಿಕೊಂಡಿರುವ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.