ETV Bharat / state

ಗಡಿಕೇಶ್ವರ ಗ್ರಾಮದಲ್ಲಿ ಮತ್ತೆ ಭಾರಿ ಸದ್ದು : ನಿಗೂಢ ಸೌಂಡ್​ಗೆ ಬೆಚ್ಚಿಬಿದ್ದ ಜನ - ಗಡಿಕೇಶ್ವರ ಗ್ರಾಮದ ಭೂಮಿಯಲ್ಲಿ ಮತ್ತೆ ಭಾರಿ ಸದ್ದು

ಗಡಿಕೇಶ್ವರ ಗ್ರಾಮದ ಭೂಮಿಯಿಂದ ಮತ್ತೆ ಭಾರಿ ಸದ್ದು ಕೇಳಿ‌ ಬಂದಿದ್ದು, ಗ್ರಾಮದ ಜನ ಭಯದಲ್ಲೇ ಜೀವನ‌ ಕಳೆಯುವಂತ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ 11 ಗಂಟೆ 16 ನಿಮಿಷಯಕ್ಕೆ ಭೂಮಿಯಿಂದ ಕೇಳಿಬಂದಿರುವ ಭಾರಿ ಶಬ್ದದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

There is a loud noise on the earth again in Kalaburagi district
ಗಡಿಕೇಶ್ವರ ಗ್ರಾಮದ ಭೂಮಿಯಲ್ಲಿ ಮತ್ತೆ ಭಾರಿ ಸದ್ದು
author img

By

Published : Jan 31, 2021, 1:50 PM IST

ಕಲಬುರಗಿ: ಜಿಲ್ಲೆಯ ಗಡಿಕೇಶ್ವರ ಗ್ರಾಮದ ಜನರು ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ. ಇಲ್ಲಿ ಭಾರಿ ಶಬ್ದ ಕೇಳಿಬಂದಿದ್ದರಿಂದ ಕಂಗಾಲಾದ ಜನರು ಭಯಭೀತರಾಗಿ‌ ಮನೆಯಿಂದ ಹೊರ ಬಂದಿದ್ದಾರೆ.

ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಭೂಮಿಯಿಂದ ಮತ್ತೆ ಭಾರಿ ಸದ್ದು ಕೇಳಿ‌ ಬಂದಿದ್ದು, ಗ್ರಾಮದ ಜನ ಭಯದಲ್ಲೇ ಜೀವನ‌ ಸಾಗಿಸುವಂತೆ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ 11 ಗಂಟೆ 16 ನಿಮಿಷಕ್ಕೆ ಭೂಮಿಯಿಂದ ಕೇಳಿಬಂದಿರುವ ಭಾರಿ ಶಬ್ದ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಭೂಮಿಯಿಂದ ಆಗಾಗ್ಗೆ ಈ ರೀತಿಯ ನಿಗೂಢ ಶಬ್ದ ಕೇಳಿ ಬರ್ತಿದೆ. ಇದೇ ಜನವರಿ 12 ರಂದು ಮೂರು ಬಾರಿ ಕೇಳಿ ಶಬ್ದ ಕೇಳಿಬಂದಿತ್ತು. ಇದೀಗ ಮತ್ತೆ ಭೂಮಿಯಿಂದ ಕೇಳಿಬಂದಿರುವ ಈ ಸೌಂಡ್​ ಜನರನ್ನು ಕಂಗಾಲಾಗಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಆಗಾಗ್ಗೆ ಭೂಮಿಯಿಂದ ಈ ರೀತಿಯ ನಿಗೂಢ ಶಬ್ದ ಬರುತ್ತಿದ್ದು ಗ್ರಾಮಸ್ಥರು ಭಯದಲ್ಲಿಯೇ ಬದುಕುತ್ತಿದ್ದಾರೆ.

ಓದಿ : ಹುಬ್ಬಳ್ಳಿ ರೈಲ್ವೆ ಪೊಲೀಸರ ಭರ್ಜರಿ ಬೇಟೆ: 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಆರೋಪಿ ಅರೆಸ್ಟ್​

For All Latest Updates

TAGGED:

Kalburgi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.