ETV Bharat / state

ಕಲಬುರಗಿಯಲ್ಲಿ ಹಾಡಹಗಲೇ ಮನೆಗೆಳಿಗೆ ಕನ್ನ ಹಾಕ್ತಿದ್ದ ಖದೀಮರು ಅಂದರ್​ - theft accused arrest

ಹಾಡಹಗಲೇ ಮನೆಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಖದೀಮರನ್ನು ಬಂಧಿಸುವಲ್ಲಿ ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 25 ಗ್ರಾಮ್​ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.

theft accused arrest in Kalburgi
ಕಲಬುರಗಿಯಲ್ಲಿ ಖತರ್ನಾಕ್ ಖದೀಮರು ಅಂದರ್​
author img

By

Published : Feb 25, 2020, 10:38 PM IST

ಕಲಬುರಗಿ: ಹಾಡಹಗಲೇ ಮನೆಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಖದೀಮರನ್ನು ಗ್ರಾಮೀಣ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ತಾಜ್ ಸುಲ್ತಾನಪುರ ನಿವಾಸಿ ಮಧು ಪವಾರ ಮತ್ತು ಸಾವಳಗಿ ನಿವಾಸಿ ಗಣೇಶ್ ಕಾಳೆ ಬಂಧಿತ ಆರೋಪಿಗಳು. ಇವರು ಫೆ.17 ರಂದು ಹಾಡಹಗಲೇ ನಗರದ ಕೆಎಸ್​ಆರ್​ಟಿಸಿ ಕಾಲೋನಿ ನಿವಾಸಿ ಚಿದಾನಂದ ಎಂಬುವರ ಮನೆಯ ಬೀಗ ಮುರಿದು ಒಳಹೊಕ್ಕು, ಅಲ್ಮೆರಾದಲ್ಲಿದ್ದ ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಲೆ ಬಾಳುವ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.‌

ಈ ಕುರಿತು ಮನೆ ಮಾಲೀಕ ಚಿದಾನಂದ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಖದೀಮರಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೂ ಕೋಳ ತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 25 ಗ್ರಾಮ್​ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.