ಕಲಬುರಗಿ: ಜಿಲ್ಲಾಧಿಕಾರಿ ಬಿ.ಶರತ್ ಅವರ ಮನೆಯಲ್ಲಿ ಹಾವೊಂದು ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಸಿತು. ಇದನ್ನು ಕಂಡ ಪೊಲೀಸ್ ಸಿಬ್ಬಂದಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಂಟ್ರೋಲ್ ರೂಮ್ಗೆ ಮಾಹಿತಿ ರವಾನಿಸಿದರು.
ತಕ್ಷಣ ಸ್ನೇಕ್ ಪ್ರಶಾಂತ್ ಜಿಲ್ಲಾಧಿಕಾರಿಗಳ ಮನೆಗೆ ಆಗಮಿಸಿ ಹಾವನ್ನು ರಕ್ಷಿಸಿ ನಿರ್ಜನ ಪ್ರದೇಶಕ್ಕೆ ಬಿಡಲು ತೆಗೆದುಕೊಂಡು ಹೋದರು. ಹಾವು ರಕ್ಷಣೆಯ ಬಳಿಕ ತಮ್ಮ ಮೊಬೈಲ್‌ನಲ್ಲಿ ಫೋಟೋ ಸೆರೆಹಿಡಿದ ಜಿಲ್ಲಾಧಿಕಾರಿ ಬಿ.ಶರತ್ ಹಾವಿನ ಬಗ್ಗೆ ಮಾಹಿತಿ ಪಡೆದರು.
ಸ್ನೇಕ್ ಪ್ರಶಾಂತ ನೀಡಿದ ಮಾಹಿತಿ ಪ್ರಕಾರ, ಸುಮಾರು 4 ಮೀಟರ್ ಉದ್ದದ ಟ್ರಿಂಕೇಟ್ ತಳಿಯ ಹಾವು ಇದಾಗಿದೆ. ವಿಷಕಾರಿ ಅಲ್ಲದಿದ್ದರೂ, ಇದನ್ನು ನೋಡಿದ ಜನರು ಭಯಬಿಳುವುದು ಸಾಮಾನ್ಯ. ಸದ್ಯ ಈ ಹಾವು ಮೊಟ್ಟೆ ಹಾಕುವ ಸ್ಥಿತಿಯಲ್ಲಿದೆ. ಸುರಕ್ಷಿತವಾಗಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರುವುದಾಗಿ ತಿಳಿಸಿದ್ದಾರೆ.