ಸೇಡಂ : ಕೃಷಿ ಜಮೀನುಗಳಿಗೂ ರಸ್ತೆ ನಿರ್ಮಿಸುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಆದರೆ, ಅಧಿಕಾರಿಗಳ ನಿಧಾನಗತಿಗೆ ಬೇಸತ್ತ ರೈತರು ಸ್ವಂತ ಹಣದಲ್ಲೇ ರಸ್ತೆ ನಿರ್ಮಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಪಟ್ಟಣದ ಹೆಡ್ಡಳ್ಳಿ ರಸ್ತೆ ಸಮೀಪದ ಜಮೀನುಗಳ ರೈತರು ಹಲವಾರು ದಿನಗಳಿಂದ ತಮ್ಮ ಜಮೀನುಗಳಿಗೆ ತೆರಳಲು ರಸ್ತೆ ನಿರ್ಮಿಸಿ ಕೊಡುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದ್ದರು. ಹಲವು ವರ್ಷಗಳೇ ಕಳೆದರೂ ಅವರ ಆಸೆ ಈಡೇರಲಿಲ್ಲ. ಈಗ ಸುಮಾರು 40 ಜನ ರೈತರು ತಲಾ ಐದು ಸಾವಿರ ಹಣ ಹಾಕಿ, ಸುಮಾರು 1.2 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ.
ಇದಕ್ಕೆ ಶಿವಶಂಕರೇಶ್ವರ ಮಠದ ಪೀಠಾಧಿಪತಿ ಶಿವಶಂಕ್ರಯ್ಯ ಮಹಾಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.