ETV Bharat / state

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಡ್ರೆಸ್​ ಇಲ್ಲದ ಪಕ್ಷ ಈಗ ದೇಶಭಕ್ತಿಯ ಪಾಠ ಮಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ - news kannada

ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬಿಜೆಪಿಗೆ ಅಡ್ರೆಸ್ಸೇ ಇರಲಿಲ್ಲ. ಅಂತಹುದರಲ್ಲಿ ಈಗ ದೇಶಭಕ್ತಿಯ ಪಾಠ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
author img

By

Published : Apr 10, 2019, 8:02 PM IST

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಸಂವಿಧಾನಬದ್ಧ ಹಕ್ಕುಗಳಡಿ ಪ್ರತಿಯೊಬ್ಬರೂ ಸಮಾನ ಅವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ. ಆದರೆ, ಸಂವಿಧಾನದ ಮೂಲ ತತ್ವಗಳಿಗೆ ತೀಲಾಂಜಲಿ ಇಡುತ್ತಿರುವ ಬಿಜೆಪಿ, ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಕಲಬುರಗಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

ಅತನೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಡ್ರೆಸ್​ ಇಲ್ಲದ ಬಿಜೆಪಿ ಈಗ ದೇಶಭಕ್ತಿಯ ಪಾಠ ಮಾಡುತ್ತಿದೆ. ಈ ಮೊದಲು ಸುಳ್ಳು ಹೇಳಿ ಗೆದ್ದಿರುವ ಪ್ರಧಾನಿ ನರೇಂದ್ರ ಮೋದಿ, ಈಗ ಮತ್ತದೇ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಇವರಿಂದ ಭಾರತದ 130 ಕೋಟಿ ಜನರ ಉದ್ಧಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅಲ್ಲದೆ ಮೋದಿ ಸರ್ಕಾರ ಭಾವನಾತ್ಮಕ ವಿಷಯಗಳನ್ನು ಚುನಾವಣೆ ವಿಷಯಗಳನ್ನಾಗಿ ಮಾಡಿಕೊಂಡು ಜನರನ್ನು ದಾರಿತಪ್ಪಿಸುತ್ತಿದೆ. ಸಾಲದೆಂಬಂತೆ ದೇಶದ ರಕ್ಷಣೆ ತಾನೇ ಮಾಡುತ್ತಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.

ರೈತರ ಉದ್ಧಾರ ಮಾಡುವುದಾಗಿ ಮಾತು ನೀಡಿದ್ದ ಮೋದಿ, ಅದಾನಿ ಅವರಂತ ಶ್ರೀಮಂತರ ರಕ್ಷಣೆಗೆ ಮುಂದಾಗುವ ಮೂಲಕ ತಾವು ಬಂಡವಾಳಶಾಹಿಗಳ ಪರ ಎಂದು ನಿರೂಪಿಸುತ್ತಿದ್ದಾರೆ. ಇನ್ನು ಜನರ ಪರ ಚಿಂತನೆಗಳನ್ನು ಹೊಂದಿರುವ ರಾಹುಲ್ ಗಾಂಧಿ ಅವರು ದೇಶದ 25 ಕೋಟಿ ಜನರಿಗೆ ವಾರ್ಷಿಕ 72,000 ರೂ. ಧನ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಹಾಗಾಗಿ ಶ್ರೀಮಂತರ ಪರ ಇರುವ ಮೋದಿಯನ್ನು ತಿರಸ್ಕರಿಸಿ ಬಡವರ ಪರ ಇರುವ ರಾಹುಲ್ ಗಾಂಧಿಯವರನ್ನು ಪುರಸ್ಕರಿಸಿ ಮತದಾರರಲ್ಲಿ ಮನವಿ ಮಾಡಿದ್ದಾರೆ

Intro:ಕಲಬುರಗಿ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳು.ಸಂವಿಧಾನದ ಬದ್ದ ಹಕ್ಕುಗಳ ಅಡಿಯಲ್ಲಿ ಪ್ರತಿಯೊಬ್ಬರು ಸಮಾನ ಅವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ.ಆದರೆ, ಸಂವಿಧಾನದದ ಮೂಲತತ್ವಗಳಿಗೆ ತೀಲಾಂಜಲಿ ಇಡುತ್ತಿರುವ ಬಿಜೆಪಿ ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಲೋಕಸಭೆಯ ಕಾಂಗ್ರೇಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಅತನೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ ಅವರು.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಡ್ರೆಸ್ ಇಲ್ಲದ ಬಿಜೆಪಿ ಪಕ್ಷ ಈಗ ದೇಶಭಕ್ತಿಯ ಪಾಠ ಮಾಡುತ್ತಿದೆ,ಅವರು
ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರವಾಧಿಯಲ್ಲಿಯೂ ಅದೇ ಸುಳ್ಳನ್ನು ಮುಂದುವರೆಸಿ ಈಗ ಮತ್ತದೇ ಸುಳ್ಳುಗಳನ್ನು ಚುನಾವಣಾ ಭಾಷಣದಲ್ಲಿ ಬಳಸುತ್ತಿದ್ದಾರೆ. ಇವರಿಂದ ಭಾರತದ 130 ಕೋಟಿ ಜನರ ಉದ್ದಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಭಾವನಾತ್ಮಕ ವಿಷಯಗಳನ್ನು ಚುನಾವಣೆ ವಿಷಯಗಳನ್ನಾಗಿ ಮಾಡಿಕೊಂಡು ಜನರಿಗೆ ದಾರಿತಪ್ಪಿಸುವ ನಿರಂತರ ಪ್ರಯತ್ನ ಮಾಡುತ್ತಿರುವ ಮೋದಿ ದೇಶದ ರಕ್ಷಣೆ ತಾನೇ ಮಾಡುತ್ತಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.

ರೈತರ ಉದ್ದಾರ ಮಾಡುವುದಾಗಿ ಮಾತು ನೀಡಿದ್ದ ಮೋದಿ ಅದಾನಿ ಅವರಂತ ಶ್ರೀಮಂತರ ರಕ್ಷಣೆಗೆ ಮುಂದಾಗುವ ಮೂಲಕ ತಾವು ಬಂಡವಾಳಶಾಯಿಗಳ ಪರ ಎಂದು ನಿರೂಪಿಸುತ್ತಿದ್ದಾರೆ.ರೂ 2,77,000 ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಲಾಗಿದೆ. ಜೊತೆಗೆ ರೂ 3,75,000 ಕೋಟಿ ಸಾಲ ಪಡೆದುಕೊಂಡವರು ವಾಪಸ್ ನೀಡದೆ ವಿದೇಶಕ್ಕೆ ಪರಾರಿಯಾಗಿದ್ದಾರೆ.ಆದರೂ ಮೋದಿ ಈ ಬಗ್ಗೆ ನಿಷ್ಠುರ ಹಾಗೂ ಕಠೋರ ಕ್ರಮಕೈಗೊಂಡಿಲ್ಲ ಎಂದ ಖರ್ಗೆ, ಜನರ ಪರ ಚಿಂತನೆಗಳನ್ನು ಹೊಂದಿರುವ ರಾಹುಲ್ ಗಾಂಧಿ ಅವರು ದೇಶದ 25 ಕೋಟಿ ಜನರಿಗೆ ವಾರ್ಷಿಕ ರೂ 72,000 ಧನ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ‌. ಹಾಗಾಗಿ ಶ್ರೀಮಂತರ ಪರ ಇರುವ ಮೋದಿಯನ್ನು ತಿರಸ್ಕರಿಸಿ ಬಡವರ ಪರ ಇರುವ ರಾಹುಲ್ ಗಾಂಧಿಯವರನ್ನು ಪುರಸ್ಕರಿಸಿ ಎಂದು ಕರೆ ನೀಡಿದರು.

ನಾನು ಕೈಗೊಂಡ ಅಭಿವೃದ್ದಿ ಕೆಲಸಗಳಿಗೆ ಕೂಲಿ ಕೇಳುತ್ತಿದ್ದೇನೆ ಎಂದ ಅವರು ನಾನು ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ಮತಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಮನವಿ ಮಾಡಿದರು.Body:ಕಲಬುರಗಿ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳು.ಸಂವಿಧಾನದ ಬದ್ದ ಹಕ್ಕುಗಳ ಅಡಿಯಲ್ಲಿ ಪ್ರತಿಯೊಬ್ಬರು ಸಮಾನ ಅವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ.ಆದರೆ, ಸಂವಿಧಾನದದ ಮೂಲತತ್ವಗಳಿಗೆ ತೀಲಾಂಜಲಿ ಇಡುತ್ತಿರುವ ಬಿಜೆಪಿ ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಲೋಕಸಭೆಯ ಕಾಂಗ್ರೇಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಅತನೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ ಅವರು.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಡ್ರೆಸ್ ಇಲ್ಲದ ಬಿಜೆಪಿ ಪಕ್ಷ ಈಗ ದೇಶಭಕ್ತಿಯ ಪಾಠ ಮಾಡುತ್ತಿದೆ,ಅವರು
ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರವಾಧಿಯಲ್ಲಿಯೂ ಅದೇ ಸುಳ್ಳನ್ನು ಮುಂದುವರೆಸಿ ಈಗ ಮತ್ತದೇ ಸುಳ್ಳುಗಳನ್ನು ಚುನಾವಣಾ ಭಾಷಣದಲ್ಲಿ ಬಳಸುತ್ತಿದ್ದಾರೆ. ಇವರಿಂದ ಭಾರತದ 130 ಕೋಟಿ ಜನರ ಉದ್ದಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಭಾವನಾತ್ಮಕ ವಿಷಯಗಳನ್ನು ಚುನಾವಣೆ ವಿಷಯಗಳನ್ನಾಗಿ ಮಾಡಿಕೊಂಡು ಜನರಿಗೆ ದಾರಿತಪ್ಪಿಸುವ ನಿರಂತರ ಪ್ರಯತ್ನ ಮಾಡುತ್ತಿರುವ ಮೋದಿ ದೇಶದ ರಕ್ಷಣೆ ತಾನೇ ಮಾಡುತ್ತಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.

ರೈತರ ಉದ್ದಾರ ಮಾಡುವುದಾಗಿ ಮಾತು ನೀಡಿದ್ದ ಮೋದಿ ಅದಾನಿ ಅವರಂತ ಶ್ರೀಮಂತರ ರಕ್ಷಣೆಗೆ ಮುಂದಾಗುವ ಮೂಲಕ ತಾವು ಬಂಡವಾಳಶಾಯಿಗಳ ಪರ ಎಂದು ನಿರೂಪಿಸುತ್ತಿದ್ದಾರೆ.ರೂ 2,77,000 ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಲಾಗಿದೆ. ಜೊತೆಗೆ ರೂ 3,75,000 ಕೋಟಿ ಸಾಲ ಪಡೆದುಕೊಂಡವರು ವಾಪಸ್ ನೀಡದೆ ವಿದೇಶಕ್ಕೆ ಪರಾರಿಯಾಗಿದ್ದಾರೆ.ಆದರೂ ಮೋದಿ ಈ ಬಗ್ಗೆ ನಿಷ್ಠುರ ಹಾಗೂ ಕಠೋರ ಕ್ರಮಕೈಗೊಂಡಿಲ್ಲ ಎಂದ ಖರ್ಗೆ, ಜನರ ಪರ ಚಿಂತನೆಗಳನ್ನು ಹೊಂದಿರುವ ರಾಹುಲ್ ಗಾಂಧಿ ಅವರು ದೇಶದ 25 ಕೋಟಿ ಜನರಿಗೆ ವಾರ್ಷಿಕ ರೂ 72,000 ಧನ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ‌. ಹಾಗಾಗಿ ಶ್ರೀಮಂತರ ಪರ ಇರುವ ಮೋದಿಯನ್ನು ತಿರಸ್ಕರಿಸಿ ಬಡವರ ಪರ ಇರುವ ರಾಹುಲ್ ಗಾಂಧಿಯವರನ್ನು ಪುರಸ್ಕರಿಸಿ ಎಂದು ಕರೆ ನೀಡಿದರು.

ನಾನು ಕೈಗೊಂಡ ಅಭಿವೃದ್ದಿ ಕೆಲಸಗಳಿಗೆ ಕೂಲಿ ಕೇಳುತ್ತಿದ್ದೇನೆ ಎಂದ ಅವರು ನಾನು ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ಮತಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಮನವಿ ಮಾಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.