ETV Bharat / state

ಕಲಬುರಗಿ: ಬೈಕ್‌ - ಗೂಡ್ಸ್ ವಾಹನ ಡಿಕ್ಕಿಯಾಗಿ ತಂದೆ-ಮಗಳು ಸಾವು; ತಾಯಿ - ಮಗ ಆಸ್ಪತ್ರೆಗೆ ದಾಖಲು - Kalaburagi terrible road accident

ಬೈಕ್‌ ಹಾಗೂ ಗೂಡ್ಸ್ ವಾಹನದ ನಡುವೆ ಡಿಕ್ಕಿಯಾಗಿ ತಂದೆ - ಮಗಳು ಮೃತಪಟ್ಟು ತಾಯಿ-ಮಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

Terrible road accident in Kalaburagi
Terrible road accident in Kalaburagi
author img

By

Published : Aug 17, 2023, 2:17 PM IST

ಕಲಬುರಗಿ: ಬೈಕ್ ಹಾಗೂ ಟಾಟಾ ಏಸ್​ ಗೂಡ್ಸ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ‌ ಸ್ಥಳದಲ್ಲಿಯೇ ತಂದೆ - ಮಗಳು ಮೃತಪಟ್ಟು, ತಾಯಿ-ಮಗ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ಹೊರವಲಯದ ಜೇವರ್ಗಿ ಹೆದ್ದಾರಿ ನದಿಸಿನ್ನೂರ ಬಳಿ ಇಂದು (ಗುರುವಾರ) ನಡೆದಿದೆ.

ಮೂಲತಃ ಜೇವರ್ಗಿ ತಾಲೂಕಿನವರಾದ ಹಾಗೂ ಸದ್ಯ ಕಲಬುರಗಿಯ ರಾಘವೇಂದ್ರ ನಗರದಲ್ಲಿ ಮನೆ ಮಾಡಿಕೊಂಡಿರುವ ಪ್ರಕಾಶ ಹರಳಯ್ಯ (31) ಮತ್ತು ಪುತ್ರಿ ಅಪೇಕ್ಷಾ (4) ಮೃತಪಟ್ಟವರು. ಪತ್ನಿ ಗಾಯತ್ರಿ ಹಾಗೂ ಮಗ ಪ್ರದೀಪ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗೌಂಡಿ (ಗಾರೆ) ಕೆಲಸ ಮಾಡುತ್ತ ಉಪಜೀವನ ನಡೆಸುತ್ತಿದ್ದ ಪ್ರಕಾಶ, ಕೆಲಸದ ನಿಮಿತ್ತ ಕುಟುಂಬ ಸಹಿತ ಜೇವರ್ಗಿ ಕಡೆಗೆ ಬೈಕ್ ಮೇಲೆ ಹೋಗುತ್ತಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಡಿಕ್ಕಿಯಿಂದಾಗಿ ತಂದೆ - ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಸಂಚಾರ ಉಪ ವಿಭಾಗದ ಸಹಾಯಕ ಆಯುಕ್ತ ಇಸ್ಮಾಯಿಲ್‌ಸಾಬ, ಇನ್ಸ್​ಪೆಕ್ಟರ್​ ಶಾಂತಿನಾಥ ಮತ್ತು ಸಿಬ್ಭಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತು ಸಂಚಾರ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜ್ಯನ: ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ‌ ಗ್ರಾಮವೊಂದರಲ್ಲಿ ಬಾಲಕನ ಮೇಲೆ ಇಬ್ಬರು ಬಾಲಕರು ಹಾಗೂ ಇನ್ನೊಬ್ಬ ಸೇರಿಕೊಂಡು ಅಸಹಜ ಲೈಂಗಿಕ ದೌರ್ಜ್ಯನ ನಡೆಸಿದಲ್ಲದೇ ವಿಡಿಯೋ ಮಾಡಿ ಹರಿಬಿಟ್ಟ ವಿಚಿತ್ರ ಘಟನೆ ಕೂಡ ವರದಿ ಆಗಿದೆ.

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಎಲ್ಲಡೆ ಆಕ್ರೋಶ ವ್ಯಕ್ತವಾಗ್ತಿದೆ. ಸುದ್ದಿ ತಿಳಿಯುತ್ತಲೇ ಎಸ್ಪಿ ಇಶಾಪಂತ್, ಸಿಪಿಐ ಪಂಡಿತ ಸಗರ ಮತ್ತು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೃತ್ಯಕ್ಕೆ ಸಂಬಂದಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಸಾರಿಗೆ ಬಸ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್‌ ಸವಾರರಿಬ್ಬರ ದುರ್ಮರಣ

ಬಸ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಚಿತ್ತಾಪುರ ತಾಲೂಕಿನ ಸಾತನೂರ‌ ಬಳಿ ಇತ್ತೀಚೆಗೆ ಸಂಭವಿಸಿದ ಬೈಕ್ ಮತ್ತು ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಿಂದ ದಿಗ್ಗಾಂವ ಗ್ರಾಮದ ಮರೆಪ್ಪ (54) ಹಾಗೂ ಭಾಗಣ್ಣಾ (35) ಎಂಬ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದರು. ಅಂದು ಘಟನೆ ನಡೆದ ತಕ್ಷಣ ಸ್ಥಳಕ್ಕೆ ಸಿಪಿಐ ಪ್ರಕಾಶ್ ಯಾತನೂರ, ಚಿತ್ತಾಪುರ ಪಿಎಸ್ಐ ಶ್ರೀಶೈಲ ಅಂಬಾಟಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಶಿವಯ್ಯಾ, ಮುಕ್ತುಂ ಪಟೇಲ್, ಹುಸೇನ್ ಪಾಷಾ, ಬಸು ರೆಡ್ಡಿ ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದರು. ಈ‌ ಕುರಿತು ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.