ಸೇಡಂ(ಕಲಬುರಗಿ) : ಇಲ್ಲಿನ ತೇಲ್ಕೂರ ಪಾಟೀಲ ಫೌಂಡೇಷನ್ ಮತ್ತು ಹೆರಿಟೇಜ್ ಪಬ್ಲಿಕ್ ಸ್ಕೂಲ್ ವತಿಯಿಂದ ಉಚಿತ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.
ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಸಹೋದರ ಅನಿಲ್ ಕುಮಾರ್ ಪಾಟೀಲ ತೇಲ್ಕೂರ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಫೌಂಡೇಷನ್ ವತಿಯಿಂದ ಉಚಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ.
ಕೋವಿಡ್ ಕಷ್ಟಕಾಲದಲ್ಲಿ ಸರಿಯಾದ ವಾಹನ ಸೌಲಭ್ಯ ಮತ್ತು ಸರ್ಕಾರದ ಆ್ಯಂಬುಲೆನ್ಸ್ ಸೇವೆ ಪಡೆಯಲು ಸಮಸ್ಯೆ ಎದುರಾದವರಿಗೆ ತೇಲ್ಕೂರ ಪಾಟೀಲ ಫೌಂಡೇಷನ್ ನೆರವಾಗಲಿದೆ.
ಈ ಆ್ಯಂಬುಲೆನ್ಸ್ನಲ್ಲಿ ಆಕ್ಸಿಜನ್ ಸೌಲಭ್ಯವೂ ಇದೆ. ಇದರಿಂದ ಆಪತ್ಕಾಲದಲ್ಲಿ ಆಕ್ಸಿಜನ್ ದೊರೆಯಲಿದೆ. ಆ್ಯಂಬುಲೆನ್ಸ್ ಅವಶ್ಯಕತೆ ಇರುವವರು ಮೊಬೈಲ್ ಸಂಖ್ಯೆ 8565822666 ಅಥವಾ 8565922666 ಸಂಖ್ಯೆಗೆ ಕರೆ ಮಾಡಬಹುದಾಗಿದೆ.