ETV Bharat / state

ಮಕ್ಕಳಿಲ್ಲ ಎಂಬ ಕೊರಗಿನಲ್ಲಿ ಬಾವಿಗೆ ಜಿಗಿದು ಪ್ರಾಣಬಿಟ್ಟ ಶಿಕ್ಷಕಿ - ಮಕ್ಕಳಾಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ

ಬೆಳಗ್ಗೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದಾರೆ. ಅತ್ತ ಶಾಲೆಗೂ ಹೋಗದೆ ಇತ್ತ ಮನೆಗೂ ಬಾರದಿದ್ದಾಗ ಆತಂಕಗೊಂಡ ಮನೆಯವರು ಹುಡುಕಲಾರಂಬಿಸಿದ್ದಾರೆ. ಈ ವೇಳೆ ಬಾವಿಯ ಬಳಿ ಭೂಮಿಕಾ ಚಪ್ಪಲಿ ಸಿಕ್ಕು ಅನುಮಾನಗೊಂಡು ಬಾವಿಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ..

Bhoomika Udagi
ಭೂಮಿಕಾ ಊಡಗಿ
author img

By

Published : Mar 26, 2022, 6:47 PM IST

ಕಲಬುರಗಿ : ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದ ಶಿಕ್ಷಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದಲ್ಲಿ ನಡೆದಿದೆ. ಭೂಮಿಕಾ ಊಡಗಿ(36) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಐದು ವರ್ಷದ ಹಿಂದೆ ದಿಗ್ಗಾಂವ್ ಗ್ರಾಮದ ನಿವಾಸಿ ಶರಣಬಸಪ್ಪ ಎಂಬುವರೊಂದಿಗೆ ವಿವಾಹವಾಗಿದ್ದ ಭೂಮಿಕಾ, ದಿಗ್ಗಾಂವ್ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಬೆಳಗ್ಗೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದಾರೆ. ಅತ್ತ ಶಾಲೆಗೂ ಹೋಗದೆ ಇತ್ತ ಮನೆಗೂ ಬಾರದಿದ್ದಾಗ ಆತಂಕಗೊಂಡ ಮನೆಯವರು ಹುಡುಕಲಾರಂಬಿಸಿದ್ದಾರೆ. ಈ ವೇಳೆ ಬಾವಿಯ ಬಳಿ ಭೂಮಿಕಾ ಚಪ್ಪಲಿ ಸಿಕ್ಕು ಅನುಮಾನಗೊಂಡು ಬಾವಿಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಅವಳಿನಗರಗಳಲ್ಲಿ ಹೆಚ್ಚಾಗುತ್ತಿದೆ ಕ್ರೈಂ ರೇಟ್​

ಮದುವೆಯಾಗಿ ಐದು ವರ್ಷ ಕಳೆದರೂ ಸಹ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ‌. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.