ETV Bharat / state

ಸಿಎಂ ಸ್ಥಾನ ಪೈಪೋಟಿ: ಕಲಬುರಗಿಯಲ್ಲಿ ಸಚಿವ ನಿರಾಣಿ ಭೇಟಿಯಾದ ಮಠಾಧೀಶರು..! - ಕಲಬುರಗಿ ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕೇಳಿ ಬಂದ ಬೆನ್ನಲ್ಲೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಮಲಪಾಳಯದಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಇನ್ನು ಸಿಎಂ ರೇಸ್​​ನಲ್ಲಿರುವ ಸಚಿವ ಮುರುಗೇಶ ನಿರಾಣಿಯನ್ನು ಭೇಟಿಯಾದ ವಿವಿಧ ಮಠಾಧೀಶರು ಗುಪ್ತ ಸಭೆ ನಡೆಸಿ ಹಲವಾರು ವಿಚಾರಗಳ ಕುರಿತು ಚರ್ಚಿಸಿದ್ದಾರೆ.

swamijs-met-murugesh-nirani-in-kalaburagi
ಸಚಿವ ನಿರಾಣಿ ಭೇಟಿಯಾದ ಮಠಾಧೀಶರು
author img

By

Published : Jul 24, 2021, 7:15 PM IST

ಕಲಬುರಗಿ: ಸಿಎಂ ಬದಲಾವಣೆ ವಿಷಯ ಬಹಿರಂಗವಾದ ಹಿನ್ನೆಲೆ ಬಿಜೆಪಿಯಲ್ಲಿ ಸಂಚಲನಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇಂದು ಸಚಿವ ಮುರುಗೇಶ ನಿರಾಣಿ ಅವರನ್ನು ವಿವಿಧ ಸ್ವಾಮೀಜಿಗಳು ಭೇಟಿಮಾಡಿ ಚರ್ಚೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಕಲಬುರಗಿಯಲ್ಲಿ ಸಚಿವ ನಿರಾಣಿ ಭೇಟಿಯಾದ ಮಠಾಧೀಶರು..!

ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಸಚಿವರನ್ನ ಭೇಟಿಯಾದ ಸ್ವಾಮಿಜೀಗಳು, ಮುರುಗೇಶ​ ನಿರಾಣಿ ಅವರರೊಂದಿಗೆ ಚರ್ಚೆ ನಡೆಸಿದರು. ಶ್ರೀಶೈಲ್ ಸಾರಂಗಧರ ದೇಶಿಕೇಂದ್ರದ ಸ್ವಾಮೀಜಿ ನೇತೃತ್ವದಲ್ಲಿ ಹಲವು ಸ್ವಾಮೀಜಿಗಳು, ಮುರುಗೇಶ ನಿರಾಣಿ ಅವರನ್ನು ಅಭಿನಂದಿಸಿ ಸತ್ಕರಿಸಿದರು.

ನಂತರ ಪ್ರತ್ಯೇಕ ಕೊಠಡಿಯಲ್ಲಿ ಸಾರಂಗಧರ ಶ್ರೀಗಳು ಸಚಿವ ನಿರಾಣಿಯೊಂದಿಗೆ ಗುಪ್ತ ಸಭೆ ಮಾಡಿದ್ದಾರೆ. ಸಿಎಂ ರೇಸ್​ನಲ್ಲಿರುವ ಸಚಿವ ನಿರಾಣಿಯನ್ನು ಸ್ವಾಮೀಜಿಗಳು ಭೇಟಿ ಮಾಡಿದ್ದು ಹಲವು ಸಂಶಯಗಳು ಮೂಡುವಂತೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.