ಕಲಬುರಗಿ: ಮಧ್ಯಪ್ರದೇಶದಿಂದ ಕಲಬುರಗಿಗೆ ನಾಡ ಪಿಸ್ತೂಲ್ ಪೂರೈಕೆ ಆಗಲು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ಯಡ್ರಾಮಿ ಪೊಲೀಸರು ಬಂಧಿಸಿದ್ದಾರೆ. ಆಳಂದ ತಾಲೂಕಿನ ಝಳಕಿ ಗ್ರಾಮದ ಮಧ್ಯವರ್ತಿ ಸೈಫನ್‌ಸಾಬ್ ಹಾಗೂ ಗುರುಲಿಂಗಪ್ಪ ಎಂಬುವವರೇ ಬಂಧಿತ ಆರೋಪಿಗಳು.
ಆರೋಪಿಗಳಿಂದ ಒಂದು ನಾಡ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡ ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಇತ್ತೀಚಿಗೆ ಅಫಜಲಪುರದಲ್ಲಿ ನಾಲ್ಕು ಪಿಸ್ತೂಲ್ ಹಾಗೂ 18 ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸೈಫನ್ ಸಾಬ್ ಹೆಸರು ಕೇಳಿಬಂದಿತ್ತು. ಅಂತೆಯೇ ಈ ಪ್ರಕರಣ ಬೆನ್ನಟ್ಟಿದ ಪೊಲೀಸರು ಸೈಫನ್ ಸಾಬ್ ಜೊತೆಗೆ ಗುರುಲಿಂಗಪ್ಪ ಸಹ ಸಿಕ್ಕಿ ಬಿದ್ದಿದ್ಧಾನೆ. ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭೀಮಾತೀರದ ಬಂದೂಕುಗಳಿಗೆ ಮಧ್ಯಪ್ರದೇಶದ ನಂಟು: ಅಫಜಲಪುರದಲ್ಲಿ ನಾಲ್ವರ ಬಂಧನ