ಕಲಬುರಗಿ: ಅಧಿಕೃತ ದರ ನಿಗದಿ ಪಡಿಸದೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರಿಗೆ ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಾರಿ ಸರ್ಕಾರ ನಿಗದಿಗೊಳಿಸಿದ ಎಫ್.ಆರ್.ಪಿ. ದರದಲ್ಲಿಯೂ ಕಡಿತ ಮಾಡಿದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆ ಗೇಟ್ ಗೆ ತರೋ ಕಬ್ಬಿಗೆ ಈ ದರ ನಿಗದಿ ಮಾಡಲಾಗಿದೆ. ಆದರೆ ಕಳೆದ ವರ್ಷ ಎಫ್.ಆರ್.ಪಿ. ದರಕ್ಕಿಂತ ಕಡಿಮೆ ದರ ನೀಡಿ ಕಬ್ಬು ಬೆಳೆಗಾರರನ್ನು ವಂಚಿಸಲಾಗುತ್ತಿದೆ. ಈ ವರ್ಷ ಯಾವುದೇ ದರ ನಿಗದಿ ಮಾಡದೇ ಕಬ್ಬು ಖರೀದಿಸಲು ಕಾರ್ಖಾನೆಗಳು ಆರಂಭಿಸಿವೆ ಎಂದು ಕಬ್ಬು ಬೆಳಗಾರರ ಸಂಘದ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ನಿಗದಿಗೊಳಿಸಿದ ಎಫ್.ಆರ್.ಪಿ. ದರದಲ್ಲಿಯೂ ಕಡಿತ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷ ಪ್ರತಿ ಟನ್ ಗೆ 100 ರೂಪಾಯಿ ಕಡಿತಗೊಳಿಸಲಾಗಿದೆ. ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಕಬ್ಬಿನ ದರ ನಿಗದಿ ಮಾಡಲಾಗಿದೆ. ಆದರೆ ಕಲಬುರಗಿ ಜಿಲ್ಲೆ ವ್ಯಾಪ್ತಿಗೆ ಬರೋ ನಾಲ್ಕೂ ಕಾರ್ಖಾನೆಗಳು ದರ ನಿಗದಿ ಮಾಡದೆ ರೈತರೊಂದಿಗೆ ಕಾರ್ಖಾನೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ. ಹೊಲದಲ್ಲೇ ಕಬ್ಬು ಖರೀದಿಸಿ ಪ್ರತಿ ಟನ್ ಕಬ್ಬಿಗೆ 2500 ರೂಪಾಯಿ ದರ ನಿಗದಿ ಮಾಡಿ, ಹೊಲದಿಂದಲೇ ಕಬ್ಬು ಖರೀದಿಸಬೇಕು ಹಾಗೂ ಐದಾರು ದಿನಗಳಲ್ಲಿ ಮತ್ತೊಮ್ಮೆ ಸಭೆ ಕರೆದು ಕಬ್ಬಿನ ದರ ನಿಗದಿ ಮಾಡಬೇಕು ಇಲ್ಲಾವಾದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಸಂಘದ ಮುಖಂಡರು ಎಚ್ಚರಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಲಾದ ಎಫ್.ಆರ್.ಪಿ. ದರ:
- ಆಳಂದ ಎನ್.ಎಸ್.ಎಲ್. ಕಾರ್ಖಾನೆ - 2756.ರೂ.
- ಅಫಜಲಪುರದ ರೇಣುಕಾ ಸಕ್ಕರೆ ಕಾರ್ಖಾನೆಗೆ -2853.ರೂ.
- ಜೇವರ್ಗಿಯ ಉಗಾರ್ ಶುಗರ್ಸ್ ಕಾರ್ಖಾನೆಗೆ - 2753.ರೂ.
- ಯಾದಗಿರಿಯ ಕೋರ್ ಗ್ರೀನ್ ಕಾರ್ಖಾನೆಗೆ - 2734.ರೂ.
ಜಿಲ್ಲಾಧಿಕಾರಿ ಸಭೆ ವಿಫಲ: ಕಲಬುರಗಿ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾದ ಸಕ್ಕರ ಕಾರ್ಖಾನೆ ಪ್ರತಿನಿಧಿಗಳು ಹಾಗೂ ಕಬ್ಬು ಬೆಳೆಗಾರರ ಸಂಘದ ಮುಖಂಡರ ಸಭೆ ವಿಫಲವಾಗಿ. ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಕಬ್ಬಿನ ದರ ನಿಗದಿ ಮಾಡಲಾಗಿದೆ. ಆದರೆ ಕಲಬುರಗಿ ಜಿಲ್ಲೆ ವ್ಯಾಪ್ತಿಗೆ ಬರೋ ನಾಲ್ಕೂ ಕಾರ್ಖಾನೆಗಳು ದರ ನಿಗದಿ ಮಾಡದೆ ರೈತರೊಂದಿಗೆ ಚೆಲ್ಲಾಟ ಆಡುತ್ತಿವೆ. ಪ್ರತಿ ಟನ್ ಕಬ್ಬಿಗೆ 2500 ರೂಪಾಯಿ ದರ ನಿಗದಿ ಮಾಡಿ, ಹೊಲದಿಂದಲೇ ಖರೀದಿ ಮಾಡಬೇಕು. ಐದಾರು ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡಿ ಕಬ್ಬಿನ ದರ ನಿಗದಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಕಬ್ಬು ಬೆಳೆಗಾರರ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಸಭೆಯಲ್ಲಿ ಕೇವಲ ಆಳಂದ ಎನ್.ಎಸ್.ಎಲ್. ಕಾರ್ಖಾನೆ, ಅಫಜಲಪುರದ ರೇಣುಕಾ ಸಕ್ಕರೆ ಕಾರ್ಖಾನೆ, ಜೇವರ್ಗಿಯ ಉಗಾರ್ ಶುಗರ್ಸ್ ಕಾರ್ಖಾನೆಗೆ ಪ್ರತಿನಿಧಿಗಳು ಮಾತ್ರ ಹಾಜರಿದ್ದರು. ಯಾದಗಿರಿ ಕೋರ್ ಗ್ರೀನ್ ಕಾರ್ಖಾನೆ ಪ್ರತಿನಿಧಿಗಳ ಸಭೆ ಆಗಮಿಸಿರಲಿಲ್ಲ.