ಕಲಬುರಗಿ: ಕ್ಲಾಸ್ ರೂಂ ಬ್ಲ್ಯಾಕ್ ಬೋರ್ಡ್ ಮೇಲೆ ಡೆತ್ ನೋಟ್ ಬರೆದು ಕ್ಲಾಸ್ ರೂಂ ಕೋಣೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಂಎಸ್‌ಕೆ ಮಿಲ್ ಬಡಾವಣೆಯಲ್ಲಿ ನಡೆದಿದೆ.
ಮದಿನಾ ಕಾಲೋನಿಯ ಆಯಿಶಾ ಇಂಗ್ಲೀಷ್ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶೇಕ್ ಉಮರ್ (17) ಶಾಲೆಯ ಬೋರ್ಡ್ ಮೇಲೆ ಡೆತ್ ನೋಟ್ ಬರೆದು ಕ್ಲಾಸ್ರೂಂನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮ್ಮ ನಾನು ಈಗ ಸಾಯುತ್ತಿದ್ದೇನೆ, ನೀವು ಸುಖವಾಗಿ ಇರಿ. ನಾಲ್ಕು ದಿನ ಅಳುತ್ತೀರಿ ನಂತರ ಮರೆಯುತ್ತೀರಿ ಎಂದು ಹಿಂದಿ ಭಾಷೆಯಲ್ಲಿ ಇಂಗ್ಲೀಷ್ ಅಕ್ಷರದಲ್ಲಿ ಬರೆದಿದ್ದಾನೆ. ಮೇಲ್ನೋಟಕ್ಕೆ ಮನೆಯಲ್ಲಿ ಪೊಷಕರು ಬೈದಿದಕ್ಕೆ ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬಂದಿದೆ.
ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಶೋಕ ನಗರ, ಸ್ಟೇಷನ ಬಜಾರ್ ಠಾಣೆಯ ಇನ್ಸ್ಪೆಕ್ಟರ್ಗಳು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.