ಕಲಬುರಗಿ: ಹಾಡಹಗಲೇ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳುವು ಮಾಡಿದ ಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದೆ.
ಬಟ್ಟೆ ಅಂಗಡಿ ಮಾಲೀಕ ಭವಾನಿ ಎಂಬುವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಬೈಕ್ ನೋಡಿದಂತೆ ನಟಿಸಿ ಅದರ ಮೇಲೆ ಕುಳಿತು ಸ್ಟಾರ್ಟ್ ಮಾಡಿಕೊಂಡು ನೋಡ ನೋಡುತ್ತಿದ್ದಂತೆಯೇ ಭೂಪ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬೈಕ್ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.