ETV Bharat / state

ಕಲಬುರಗಿ ಜಿಲ್ಲೆಯ ಅಪರಾಧ ಕೃತ್ಯಗಳ ಅಂಕಿ ಸಂಖ್ಯೆಗಳು.. ಸಚಿವ ಪ್ರಿಯಾಂಕ್ ಖರ್ಗೆಯಿಂದ ಅನುಪಾಲನಾ ವರದಿ ಬಿಡುಗಡೆ - ಅಬಕಾರಿ ಪ್ರಕರಣಗಳು

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನದ ಮೇರೆಗೆ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಅನುಪಾಲನಾ ವರದಿ ಸಲ್ಲಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ
author img

By

Published : Jul 9, 2023, 8:35 PM IST

ಕಲಬುರಗಿ : ಕಳೆದ ಜೂನ್ 20 ರಂದು ಪೊಲೀಸ್, ಅಬಕಾರಿ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಚಿವರ ನಿರ್ದೇಶನದಂತೆ ಕೈಗೊಂಡ ಕ್ರಮಗಳ ಅನುಪಾಲನಾ ವರದಿ ಸಲ್ಲಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆಯಿಂದ ಅನುಪಾಲನಾ ವರದಿ ಬಿಡುಗಡೆ

ಈ‌ ಕುರಿತು ವಿವರವಾದ ಪತ್ರಿಕಾ ಹೇಳಿಕೆ ನೀಡಿರುವ ಸಚಿವರು,"ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ, ಸರಿಯಾಗಿ ಕರ್ತವ್ಯ ನಿರ್ವಹಿಸದ ಚೆಕ್ ಪೋಸ್ಟ್ ಸಿಬ್ಬಂದಿ, ಓವರ್ ಲೋಡ್, ರಾಯಲ್ಟಿ ನೀಡಿರುವುದಕ್ಕೂ ಹಾಗೂ ಹಣ ಸಂದಾಯ ಮಾಡಿರುವುದಕ್ಕೂ ತಾಳೆಯಾಗದಿರುವುದು, ಮಟ್ಕಾ, ಇಸ್ಪೀಟ್, ಗಾಂಜಾ ಮಾರಾಟ, ಮನೆ ಕಳ್ಳತನ, ಮಹಿಳೆಯರು ಧರಿಸಿರುವ ಆಭರಣ ಕಳ್ಳತನ, ಕೊಲೆ, ಸುಲಿಗೆ, ರೌಡಿಗಳ ಅಟ್ಟಹಾಸ, ಮಹಿಳೆಯರು ಕಾಣೆಯಾಗಿರುವುದು, ಕಿಡ್ನಾಪ್, ಡ್ರಗ್ ಮಾರಾಟ, ಮಂಗಳ ಮುಖಿಯರಿಂದ ಸಾರ್ವಜನಿಕರಿಗೆ ರಸ್ತೆಗಳ ಮೇಲೆ ಕಿರಿಕಿರಿ, ದರೋಡೆ, ಕ್ರಿಕೆಟ್ ಬೆಟ್ಟಿಂಗ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸ್ಥಾಪನೆ, ಸಿಸಿಟಿವಿ ಕ್ಯಾಮರಾಗಳ ಸ್ಥಾಪನೆ ಹಾಗೂ ಅವುಗಳ ಕಾರ್ಯನಿರ್ವಹಣೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡುವುದು, ಅಕ್ರಮ ಚಟುವಟಿಕೆ ಮಾಡುವವರೊಂದಿಗೆ ಪೊಲೀಸರ ಕೈಜೋಡಿಸುವಿಕೆ, ಸಿವಿಲ್ ಪ್ರಕರಣಗಳಲ್ಲಿ ಪೊಲೀಸರ ಒತ್ತಾಯದ ರಾಜಿ ಹೀಗೆ ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಎಲ್ಲ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು ಎಂದು ಸಮಯ ನಿಗದಿಪಡಿಸಿದ್ದೆ. ಈ ಹಿನ್ನೆಲೆಯಲ್ಲಿ ಚುರುಕಾದ ಪೊಲೀಸ್ ಇಲಾಖೆ ಅಧಿಕಾರಿಗಳು ತಾವು ಕೈಗೊಂಡ ಕ್ರಮಗಳ ಬಗ್ಗೆ ಸವಿವರವಾದ ವರದಿಯೊಂದನ್ನು ಸಲ್ಲಿಸಿದ್ದಾರೆ" ಎಂದು ಸಚಿವರು ಹೇಳಿದ್ದಾರೆ.

  • ಕಳೆದ ಹಲವಾರು ವರ್ಷಗಳಿಂದ ಅವಧಿ ಮುಗಿದರೂ ಕೂಡಾ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ವರ್ಗಾವಣೆಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಲಾಗಿತ್ತು.
  • ಕಳೆದ ಎಂಟು ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಜನ ಎಎಸ್​ಐ, 58 ಜನ ಸಿಹೆಚ್​ಸಿ, 34 ಜನ ಸಿಪಿಸಿ ಸೇರಿದಂತೆ ಒಟ್ಟು 100 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.
  • ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ವ್ಯವಹಾರ ಕೇಂದ್ರಗಳಾಗಿವೆ. ವಿಶ್ವವಿದ್ಯಾಲಯ ಠಾಣೆಯ ವ್ಯಾಪ್ತಿಯಲ್ಲಿನ ಸಿವಿಲ್ ವಿಷಯದ ಪ್ರಕರಣದಲ್ಲಿ ಪೊಲೀಸರೆ ಮುಂದೆ ನಿಂತು ತಂತಿ ಬೇಲಿ ಹಾಕಿಸಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು‌ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
  • ಈ ಹಿನ್ನೆಲೆಯಲ್ಲಿ ಸಿವಿಲ್ ವಿಷಯದ ಅರ್ಜಿಗಳು ಬಂದರೆ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಪಕ್ಷಗಾರರಿಗೆ ಸೂಚಿಸಿ, ಹಾಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಜ್ಞೆಯ ಅಪರಾಧಗಳು ನಡೆದರೆ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಳ್ಳಬೇಕೆಂದು 22-06-2023 ರಂದು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ಪಿಐ ಹಾಗೂ ಎಸಿಪಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಸಿವಿಲ್ ವಿಷಯದ ಪ್ರಕರಣಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
  • ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಸಚಿವರು ಗಮನ ಸೆಳೆದಿದ್ದರು.
  • ನಗರ ವ್ಯಾಪ್ತಿಯ 14 ಪೊಲೀಸ್ ಠಾಣೆಗಳ ಪೈಕಿ ಮಹಿಳಾ ಠಾಣೆ ಹೊರತುಪಡಿಸಿ ಮಿಕ್ಕ 13 ಠಾಣೆಗಳಲ್ಲಿ ಒಟ್ಟು 52 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆ ಸೂಪರ್ ಮಾರ್ಕೆಟ್ ಬಳಿ ಇರುವ ಹಳೆಯ ಗ್ರಾಮೀಣ ವೃತ್ತ ಕಚೇರಿಗೆ ಸ್ಥಳಾಂತರಗೊಂಡಿರುವುದರಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದಿಲ್ಲ.
  • ಜೊತೆಗೆ ನಗರದ ಪ್ರಮುಖ 25 ಸ್ಥಳಗಳಲ್ಲಿ ಒಟ್ಟು 60 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ 57 ಕ್ಯಾಮೆರಾಗಳು ಕಾರ್ಯ‌ನಿರ್ವಹಿಸುತ್ತಿದ್ದು, ತಾಂತ್ರಿಕ ಕಾರಣಗಳಿಂದ 3 ಕ್ಯಾಮೆರಾಗಳು ಸ್ಥಗಿತವಾಗಿರುತ್ತವೆ.
  • ಇದಲ್ಲದೇ, ನಗರದ 20 ಸ್ಥಳಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ 53 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ವಾರ್ಷಿಕ ನಿರ್ವಹಣೆ ಇಲ್ಲದ ಕಾರಣ ಎಲ್ಲಾ 53 ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡಿರುತ್ತವೆ. ಹೀಗಾಗಿ, 13-03-2023 ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸದರಿ ಕ್ಯಾಮರಾ ದುರಸ್ತಿ ಹಾಗೂ ವಾರ್ಷಿಕ ನಿರ್ವಹಣೆಗೆ ತಗುಲುವ ಅನುದಾನವನ್ನು ಬಿಡುಗಡೆಗೊಳಿಸಲು ಅಂದಾಜು ಪಟ್ಟಿ ಸಲ್ಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
  • ಪೊಲೀಸ್ ಠಾಣೆಗಳಲ್ಲಿ ಶುಚಿತ್ಚ ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ಮಹಿಳಾ ಶೌಚಾಲಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದರು.
  • ನಗರ ವ್ಯಾಪ್ತಿಯ 14 ಪೊಲೀಸ್ ಠಾಣೆಗಳ ಪೈಕಿ, ವಿಶ್ವವಿದ್ಯಾಲಯ, ಚೌಕ್ ಹಾಗೂ ಮಹಿಳಾ ಠಾಣೆಗಳನ್ನು ಹೊರತುಪಡಿಸಿ ಎಲ್ಲಾ ಠಾಣೆಗಳಲ್ಲಿ ಮಹಿಳಾ ಶೌಚಾಲಯಗಳಿವೆ. ಮಹಿಳಾ ಠಾಣೆ ಹಳೆಯ ಗ್ರಾಮೀಣ ವೃತ್ತ ಠಾಣೆಗೆ ಸ್ಥಳಾಂತರಗೊಂಡಿದ್ದರಿಂದ ಪಕ್ಕದ ಜಲಮಂಡಳಿ ಕಚೇರಿಯ ಆವರಣದಲ್ಲಿರುವ ಮಹಿಳಾ ಶೌಚಾಲಯವನ್ನು ತಾತ್ಕಾಲಿಕವಾಗಿ ಉಪಯೋಗಿಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
  • ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ಧ 20-06-2023 ರಿಂದ ಇಲ್ಲಿಯವರೆಗೆ ಒಟ್ಟು 12 ಪ್ರಕರಣಗಳು ಹಾಗೂ ಅಕ್ರಮ ಮರಳು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ವಿರುದ್ಧ 4 ಪಿಎಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಈ ಹಿಂದೆ ಒಬ್ಬ ಆರೋಪಿತನನ್ನು ಗಡಿಪಾರು ಮಾಡಲಾಗಿದೆ.

2021 ರಲ್ಲಿ 215 ಪ್ರಕರಣಗಳು ದಾಖಲಾಗಿವೆ. 2022 ರಲ್ಲಿ 119 ಪ್ರಕರಣಗಳು ದಾಖಲಾಗಿವೆ. 2023 ರಲ್ಲಿ 88 ಪ್ರಕರಣಗಳು ಸೇರಿದಂತೆ ಒಟ್ಟು 422 ಪ್ರಕರಣಗಳು ದಾಖಲಾಗಿವೆ.

ಇಸ್ವೀಟ್ : ದಿನಾಂಕ 20-06-2023 ರಿಂದ ಇಲ್ಲಿಯವರೆಗೆ ಅಕ್ರಮ ಜೂಜಾಟ ಆಡುತ್ತಿರುವವರ ವಿರುದ್ಧ ಒಟ್ಟು 12 ಪ್ರಕರಣಗಳನ್ನು ದಾಖಲಿಸಿ 74 ಜನರ ಮೇಲೆ‌ ಕಾನೂನಿನ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಈ ಹಿಂದೆ ಒಬ್ಬ ಆರೋಪಿತನನ್ನು ಗಡಿಪಾರು ಮಾಡಲಾಗಿದೆ.

2021ರಲ್ಲಿ 170 ಪ್ರಕರಣಗಳು ವರದಿಯಾಗಿದ್ದು, 1038 ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2022 ರಲ್ಲಿ 165 ಪ್ರಕರಣಗಳು ವರದಿಯಾಗಿದ್ದು, 1208 ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2023 ರಲ್ಲಿ 69 ಪ್ರಕರಣಗಳು ವರದಿಯಾಗಿದ್ದು, 455 ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೀಗೆ 404 ಪ್ರಕರಣಗಳಲ್ಲಿ 2701 ಆರೋಪಿಗಳ ಮೇಲೆ‌ ಕ್ರಮ ಕೈಗೊಳ್ಳಲಾಗಿದೆ.

ಮಟ್ಕಾ: ದಿನಾಂಕ 20-06-2023 ರಿಂದ ಇಲ್ಲಿಯವರೆಗೆ ಮಟ್ಕಾ ಆಡುತ್ತಿದ್ದವರ ಮೇಲೆ 11 ಪ್ರಕರಣ ದಾಖಲಿಸಿ 14 ಜನ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ವಿರುದ್ಧ ಮುಂಜಾಗ್ರತ ಕ್ರಮವಾಗಿ 5 ಪಿಎಆರ್ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಈ‌ ಹಿಂದೆ 16 ಆರೋಪಿತರನ್ನು ಗಡಿಪಾರು ಮಾಡಲಾಗಿದೆ.

2021 ರಲ್ಲಿ 294 ಪ್ರಕರಣಗಳು ವರದಿಯಾಗಿದ್ದು, 344 ಜನ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2022 ರಲ್ಲಿ 310 ಪ್ರಕರಣಗಳು ವರದಿಯಾಗಿದ್ದು, 360 ಜನ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2023 ರಲ್ಲಿ 133 ಪ್ರಕರಣಗಳು ವರದಿಯಾಗಿದ್ದು, 145 ಜನ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೀಗೆ 737 ಪ್ರಕರಣಗಳಲ್ಲಿ 849 ಆರೋಪಿತರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.

ಬೆಟ್ಟಿಂಗ್: 2023ರ ಸಾಲಿನಲ್ಲಿ KP Act ಅಡಿಯಲ್ಲಿ 2777 ಪ್ರಕರಣಗಳನ್ನು ದಾಖಲಿಸಲಾಗಿದೆ. 2021 ರಲ್ಲಿ 01 ಪ್ರಕರಣಗಳು ವರದಿಯಾಗಿದ್ದು‌, 2 ಆರೋಪಿತರ ಮೇಲೆ ಕ್ರಮ ಕೈಗೊಳ್ಳಲಾಗಿದೆ. 2022ರಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. 2023 ರಲ್ಲಿ 01 ಪ್ರಕರಣ ವರದಿಯಾಗಿದ್ದು, 01 ಆರೋಪಿಯ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಮಹಿಳೆಯರ ನಾಪತ್ತೆ ಪ್ರಕರಣಗಳು: 2020 ರಲ್ಲಿ 74 ಪ್ರಕರಣಗಳು ‌ವರದಿಯಾಗಿದ್ದು, 72 ಪತ್ತೆಯಾಗಿರುತ್ತವೆ ಹಾಗೂ 2 ಪ್ರಕರಣಗಳು ತನಿಖೆ ಹಂತದಲ್ಲಿವೆ. 2021 ರಲ್ಲಿ 119 ಪ್ರಕರಣಗಳು ವರದಿಯಾಗಿದ್ದು, 114 ಪತ್ತೆಯಾಗಿದ್ದು 5 ಪ್ರಕರಣಗಳ ತನಿಖೆ ನಡೆಯುತ್ತಿದೆ.

2022 ರಲ್ಲಿ 111 ಪ್ರಕರಣಗಳು‌ ವರದಿಯಾಗಿದ್ದು, 101 ಪತ್ತೆಯಾಗಿದ್ದು, 10 ಪ್ರಕರಣಗಳ ತನಿಖೆ ನಡೆಯುತ್ತಿದೆ. 2023 ರಲ್ಲಿ‌ 46 ಪ್ರಕರಣಗಳು ವರದಿಯಾಗಿದ್ದು, 27 ಪತ್ತೆಯಾಗಿದ್ದು 19 ಪ್ರಕರಣಗಳ ತನಿಖೆ ನಡೆಯುತ್ತಿದೆ. ದಿನಾಂಕ 20-06-2023 ರಿಂದ ಇಲ್ಲಿಯವರೆಗೆ 8 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಹೀಗೆ 350 ಪ್ರಕರಣಗಳಲ್ಲಿ 314 ಪತ್ತೆಯಾಗಿದ್ದು, 36 ತನಿಖೆ‌ ಹಂತದಲ್ಲಿವೆ.

ಕಿಡ್ನಾಪ್: 2020ರಲ್ಲಿ 25 ಪ್ರಕರಣಗಳು ವರದಿಯಾಗಿತ್ತು. 24 ಪತ್ತೆಯಾಗಿದ್ದು‌, 01 ಸಿಎಫ್​ಆರ್ ಆಗಿದೆ.

2021 ರಲ್ಲಿ 47 ಪ್ರಕರಣಗಳು ವರದಿಯಾಗಿದ್ದು, 45 ಪತ್ತೆಯಾಗಿದೆ. 02 ಸಿಎಫ್​ಆರ್ ಆಗಿದೆ. 2022ರಲ್ಲಿ 40 ಪ್ರಕರಣಗಳು ವರದಿಯಾಗಿದ್ದು, 38 ಪತ್ತೆಯಾಗಿವೆ. 02 ತನಿಖೆ ಹಂತದಲ್ಲಿವೆ. 2023 ರಲ್ಲಿ 25 ಪ್ರಕರಣಗಳು ವರದಿಯಾಗಿದ್ದು, 20 ಪತ್ತೆಯಾಗಿದೆ. 05 ತನಿಖೆ‌ ಹಂತದಲ್ಲಿವೆ. ಹೀಗೆ 137 ಪ್ರಕರಣಗಳಲ್ಲಿ 107 ಪತ್ತೆಯಾಗಿದ್ದು, 03 ಸಿಎಫ್​ಆರ್ ಆಗಿದ್ದು,27 ತನಿಖೆ ಹಂತದಲ್ಲಿವೆ.

ಮಹಿಳೆಯರ ಅಪಹರಣ: 2020ರಲ್ಲಿ 09 ಪ್ರಕರಣಗಳು ವರದಿಯಾಗಿದ್ದು, 09 ಪತ್ತೆಯಾಗಿವೆ. 2021 ರಲ್ಲಿ 26 ಪ್ರಕರಣಗಳ ‌ವರದಿಯಾಗಿದ್ದು, 25 ಪತ್ತೆಯಾಗಿವೆ. 01 ಸಿಎಫ್​ಆರ್​ ಆಗಿದೆ. 2022ರಲ್ಲಿ 24 ಪ್ರಕರಣಗಳು‌ ವರದಿಯಾಗಿದ್ದು, 22 ಪತ್ತೆಯಾಗಿವೆ. 02 ತನಿಖೆ ಹಂತದಲ್ಲಿವೆ. 2023ರಲ್ಲಿ 15 ಪ್ರಕರಣಗಳು ‌ವರದಿಯಾಗಿದ್ದು, 13 ಪತ್ತೆಯಾಗಿವೆ. 02 ತನಿಖೆ‌ ಹಂತದಲ್ಲಿವೆ. ದಿನಾಂಕ‌20-06-2023 ರಿಂದ ಇಲ್ಲಿಯವರೆಗೆ 03 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ಕೊಲೆ : 2021ರಲ್ಲಿ 41 ಪ್ರಕರಣಗಳು ವರದಿಯಾಗಿದ್ದು, 39 ಪತ್ತೆಯಾಗಿವೆ. 01 ಸಿಎಫ್​ಆರ್ ಆಗಿದ್ದು, 01 ತನಿಖೆ‌ ನಡೆಯುತ್ತಿದೆ. 2022 ರಲ್ಲಿ 56 ಪ್ರಕರಣಗಳು ವರದಿಯಾಗಿದ್ದು, 50 ಪತ್ತೆಯಾಗಿವೆ. 06 ತನಿಖೆ‌ ಹಂತದಲ್ಲಿವೆ. 2023ರಲ್ಲಿ 29 ಪ್ರಕರಣಗಳು ವರದಿಯಾಗಿದ್ದು, 10 ಪತ್ತೆಯಾಗಿದ್ದು, 06 ತನಿಖೆ ಹಂತದಲ್ಲಿವೆ.

ಡಕಾಯಿತಿ: 2021ರಲ್ಲಿ 02 ಪ್ರಕರಣಗಳು ವರದಿಯಾಗಿದ್ದು, 02 ಪತ್ತೆಯಾಗಿವೆ. 2022 ರಲ್ಲಿ 05 ಪ್ರಕರಣಗಳು ವರದಿಯಾಗಿದ್ದು, 05 ಪತ್ತೆಯಾಗಿವೆ.
2023 ರಲ್ಲಿ 02 ಪ್ರಕರಣಗಳು ವರದಿಯಾಗಿದ್ದು, 02 ತನಿಖೆ‌ ಹಂತದಲ್ಲಿವೆ. ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ 2022 ನೇ ಸಾಲಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ನ್ಯಾಯಾಲಯದಲ್ಲಿ‌ ವಿಚಾರಣೆಯಲ್ಲಿರುತ್ತದೆ. 2023 ನೇ ಸಾಲಿನಲ್ಲಿ ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ.

ಪೊಲೀಸ್ ಸಿಬ್ಬಂದಿ ವರ್ಗಾವಣೆ: 2023ರ ಸಾಲಿನಲ್ಲಿ ಸಾಮಾನ್ಯ ವರ್ಗಾವಣೆಯಲ್ಲಿ 05 ವರ್ಷಕ್ಕಿಂತ ಮೇಲ್ಪಟ್ಟು ಒಂದು‌ ಠಾಣೆಯಲ್ಲಿ ಮತ್ತು 10 ವರ್ಷಗಳ ಕಾಲ ಒಂದೇ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 62 ಸಿಬ್ಬಂದಿಯನ್ನು ವರ್ಗಾವಣೆ‌ ಮಾಡಲಾಗಿದೆ.

ಮಂಗಳ ಮುಖಿಯರ ಕಿರುಕುಳ: ಮಲಕೂಡ ಕ್ರಾಸ್ ರೋಡ್ ಹಂಪ್ಸ್​ಗಳ ಹತ್ತಿರ, ಕಡಗಂಚಿ ಕ್ರಾಸ್ ರೋಡ್ ಹಂಪ್ಸ್​ಗಳ ಹತ್ತಿರ, ಜೇವರ್ಗಿ ಬಸ್ ಡಿಪೋ ಹತ್ತಿರ, ಗೊಬ್ಬೂರು ಕ್ರಾಸ್ ಹತ್ತಿರ ಮತ್ತು ನೆಲೋಗಿ ಟೋಲ್ ಗೇಟ್ ಹತ್ತಿರ ನಿಂತುಕೊಳ್ಳುತ್ತಿದ್ದ ಮಂಗಳಮುಖಿಯರಿಗೆ ಸಂಬಂಧಪಟ್ಟ ಠಾಣೆಯ ಪಿಎಸ್​ಐ ಅವರು‌ ಸೂಕ್ತ ತಿಳುವಳಿಕೆ ನೀಡಿ ರಸ್ತೆಗಳಲ್ಲಿ ನಿಲ್ಲದಂತೆ ಸೂಚಿಸಲಾಗಿದೆ.

ಠಾಣೆಗಳಲ್ಲಿ ಮೂಲಭೂತ ಸೌಲಭ್ಯ: ಜಿಲ್ಲೆಯ ಮಹಾಗಾಂವ, ಕೊಂಚಾವರಂ ಹಾಗೂ ಕಾಳಗಿ ಪೊಲೀಸ್ ಠಾಣೆಗಳಲ್ಲಿ, ಚಿತ್ತಾಪುರ ಸಿಪಿಐ ಕಚೇರಿಯಲ್ಲಿ ಮತ್ತು ಚಿಂಚೋಳಿ‌ ಡಿಎಸ್​ಪಿ ಕಚೇರಿಯಲ್ಲಿ ಮಹಿಳಾ ಶೌಚಾಲಯಗಳಿರುವುದಿಲ್ಲ.‌

ಅಬಕಾರಿ ಪ್ರಕರಣಗಳು: 2020 ರಲ್ಲಿ 125 ಪ್ರಕರಣಗಳು ವರದಿಯಾಗಿದ್ದು, 142 ಆರೋಪಿತರ ಮೇಲೆ‌ ಕ್ರಮ ಜರುಗಿಸಲಾಗಿದೆ. 2021 ರಲ್ಲಿ 57 ಪ್ರಕರಣಗಳು ವರದಿಯಾಗಿದ್ದು, 63 ಆರೋಪಿತರ ಮೇಲೆ‌ ಕ್ರಮ ಜರುಗಿಸಲಾಗಿದೆ. 2022 ರಲ್ಲಿ 156 ಪ್ರಕರಣಗಳು ವರದಿಯಾಗಿದ್ದು, 170 ಆರೋಪಿತರ ಮೇಲೆ‌ ಕ್ರಮ ಜರುಗಿಸಲಾಗಿದೆ. 2023 ರಲ್ಲಿ 260 ಪ್ರಕರಣಗಳು ವರದಿಯಾಗಿದ್ದು, 303 ಆರೋಪಿತರ ಮೇಲೆ‌ ಕ್ರಮ ಜರುಗಿಸಲಾಗಿದೆ. ಹೀಗೆ 598 ಪ್ರಕರಣಗಳಲ್ಲಿ 678 ಆರೋಪಿತರ ಮೇಲೆ‌ ಕ್ರಮ ಕೈಗೊಳ್ಳಲಾಗಿದೆ ಎಂದು ಅನುಪಾಲನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಐಟಿ ಕಂಪನಿಗಳ ಉದ್ಯೋಗಕ್ಕೆ ಕನ್ನಡಿಗರನ್ನು ಸಜ್ಜುಗೊಳಿಸುವ ಯೋಜನೆ; ಸಚಿವ ಪ್ರಿಯಾಂಕ್ ಖರ್ಗೆ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.