ETV Bharat / state

ಎಲ್ಲಾ ಪಕ್ಷದವರೂ ಅಷ್ಟೇ.. ಕಮಿಷನ್​​ ಪಡೆಯದೇ ಗುದ್ದಲಿ ಪೂಜೆ ಮಾಡಲ್ಲ: ಜಗನ್ನಾಥ ಶೇಗಜಿ - ಗುತ್ತಿಗೆದಾರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಜಗನ್ನಾಥ ಶೇಗಜಿ

ಈಶ್ವರಪ್ಪ ವಿರುದ್ಧ ಹಿಂದೆಯೇ ಸಂತೋಷ್ ದೂರು ನೀಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಆಗಲಿ ಸಿಎಂ ಬಸವರಾಜ ಬೊಮ್ಮಾಯಿ ಆಗಲಿ ವಿಚಾರವನ್ನು ಗಂಭೀರವಾಗಿಯೇ ತೆಗೆದುಕೊಂಡಿಲ್ಲ. ಅವರ ನಿರ್ಲಕ್ಷ್ಯವೇ ಸಂತೋಷ್​ ಸಾವಿಗೆ ಕಾರಣವಾಗಿದೆ ಎಂದು ಜಗನ್ನಾಥ ಶೇಗಜಿ ದೂರಿದರು.

ಗುತ್ತಿಗೆದಾರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಜಗನ್ನಾಥ ಶೇಗಜಿ

author img

By

Published : Apr 13, 2022, 1:00 PM IST

Updated : Apr 13, 2022, 5:25 PM IST

ಕಲಬುರಗಿ: ರಾಜ್ಯದ ಯಾವುದೇ ಇಲಾಖೆಯ ಕಾಮಗಾರಿಯಾದರೂ ಶಾಸಕರು ಕಮಿಷನ್​ ಪಡೆಯದೇ ಗುದ್ದಲಿ ಪೂಜೆ ಮಾಡುವುದೇ ಇಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಶಾಸಕರೂ ಪರ್ಸೆಂಟೇಜ್ ತೆಗೆದುಕೊಳ್ಳುತ್ತಾರೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿಗೆ ಹೆಸರಿಗೆ ಬಿಜೆಪಿಯವರು ಕಳಂಕ ತರುತ್ತಿದ್ದಾರೆ ಎಂದು ಗುತ್ತಿಗೆದಾರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಮತ್ತು‌ ರಾಜ್ಯ ಗುತ್ತಿಗೆದಾರರ ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೇಗಜಿ ಆರೋಪಿಸಿದ್ದಾರೆ.

ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್​ ಆತ್ಮಹತ್ಯೆ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂತೋಷ್​ ಸಾವಿನ ಬಗ್ಗೆ ನಿವೃತ್ತ ನ್ಯಾಯಾಧೀಶದಿಂದ ಸಮಗ್ರ ತನಿಖೆ ನಡೆಸಬೇಕು. ಸಚಿವ ಈಶ್ವರಪ್ಪ ತಮಗೆ ಸಂಬಂಧವೇ ಇಲ್ಲ ಎಂದು ಹೇಗೆ ಹೇಳುತ್ತಾರೆ?. ಸಂತೋಷ್​ ಜೊತೆಗೆ ಸಂಬಂಧ ಇರದೇ ಇದ್ದರೆ ತಮ್ಮ ಸರ್ಕಾರದಿಂದ ತನಿಖೆ ಮಾಡಿಸಬೇಕಿತ್ತು. ಮಾನನಷ್ಟ ಎಂದು ಈಶ್ವರಪ್ಪ ಕೋರ್ಟ್​ಗೆ ಯಾಕೆ ಹೋದರು ಎಂದು ಪ್ರಶ್ನಿಸಿದರು.

'ಕಮಿಷನ್​​ ಪಡೆಯದೇ ಶಾಸಕರು ಗುದ್ದಲಿ ಪೂಜೆ ಮಾಡಲ್ಲ: ಮೋದಿ ಹೆಸರಿಗೆ ಬಿಜೆಪಿಯವರಿಂದ ಕಳಂಕ'

ಈಶ್ವರಪ್ಪ ವಿರುದ್ಧ ಹಿಂದೆಯೇ ಸಂತೋಷ್ ದೂರು ನೀಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಆಗಲಿ ಸಿಎಂ ಬಸವರಾಜ ಬೊಮ್ಮಾಯಿ ಆಗಲಿ ವಿಚಾರವನ್ನು ಗಂಭೀರವಾಗಿಯೇ ತೆಗೆದುಕೊಂಡಿಲ್ಲ. ಅವರ ನಿರ್ಲಕ್ಷ್ಯವೇ ಸಂತೋಷ್​ ಸಾವಿಗೆ ಕಾರಣವಾಗಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸಲಿದ್ದೇವೆ. ಸಂತೋಷ್ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಕೇವಲ ಸಚಿವ ಈಶ್ವರಪ್ಪ ಅವರಷ್ಟೇ ಅಲ್ಲ ಎಲ್ಲ ಪಕ್ಷದ ಶಾಸಕರೂ ಕೂಡ ಕಮಿಷನ್​ ಪಡೆಯದೆ ಕೆಲಸ ಮಾಡಲ್ಲ. 10 ಪ್ರತಿಶತ ಕೊಡದಿದ್ದರೆ ಶಾಸಕರು ಭೂಮಿ ಪೂಜೆನೇ ಮಾಡಲ್ಲ. ಪರ್ಸೆಂಟೇಜ್ ಕೊಟ್ಟ ಮೇಲೂ ಪೂರ್ಣ ಪ್ರಮಾಣದ ಬಿಲ್ ಪಾಸ್ ಮಾಡುವುಲ್ಲ. ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಯ ಸಚಿವರು ಪರ್ಸೆಂಟೇಜ್ ಸಲುವಾಗಿ ಸತಾಯಿಸ್ತಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ, ಅದು ಕೊಲೆ.. ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಲಿ: ಸಂತೋಷ್​ ಪತ್ನಿ ಜಯಶ್ರೀ

Last Updated : Apr 13, 2022, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.