ETV Bharat / state

ನಾನು ಹಿಂದೂ ವಿರೋಧಿ ಅಲ್ಲ; ಮನುವಾದ, ಹಿಂದುತ್ವದ ವಿರೋಧಿ: ಸಿದ್ದರಾಮಯ್ಯ - ಈಟಿವಿ ಭಾರತ ಕನ್ನಡ

ನಾನು ಹಿಂದೂ ಧರ್ಮವನ್ನು ವಿರೋಧಿಸಿಲ್ಲ. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Feb 7, 2023, 6:26 PM IST

Updated : Feb 7, 2023, 6:55 PM IST

ಕಲಬುರಗಿ: "ನಾನು ಹಿಂದೂ ಧರ್ಮವನ್ನು ಎಂದೂ ವಿರೋಧಿಸಿಲ್ಲ. ಆದರೆ, ಮನುವಾದ ಮತ್ತು ಹಿಂದುತ್ವದ ವಿರೋಧಿಯಾಗಿದ್ದೇನೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ರೋಟರಿ ಕ್ಲಬ್ ಮೈದಾನದಲ್ಲಿ ಆಳಂದ ಮಾಜಿ‌ ಶಾಸಕ ಬಿ.ಆರ್.ಪಾಟೀಲ್ ಜೀವನ ಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

"ನನ್ನನ್ನು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ.‌ ನಾನೂ ಸಹ ಹಿಂದೂನೇ. ಯಾವುದೇ ಧರ್ಮದಲ್ಲೂ ಕೊಲೆ, ಹಿಂಸೆಗೆ ಪ್ರೋತ್ಸಾಹವಿಲ್ಲ. ಇದಕ್ಕೆಲ್ಲ ಪ್ರೋತ್ಸಾಹ ಇರೋದು ಕೇವಲ ಹಿಂದುತ್ವದಲ್ಲಿ ಮಾತ್ರ" ಎಂದು ನಿನ್ನೆ ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ನಿಮ್ಮ ಆಡಳಿತದಲ್ಲಿಯೂ ಹಿಂದೂಗಳ ಕೊಲೆಯಾಗಿದ್ದವಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಮ್ಮ‌ಕಾಲದಲ್ಲಿ ಹಿಂದೂಗಳ‌‌ದ್ದಷ್ಟೇ ಹತ್ಯೆ ಆಗಿಲ್ಲ. ಹಿಂದೂಗಳು ಹಾಗು ಅಲ್ಪಸಂಖ್ಯಾತರ ಕೊಲೆಗಳೂ ಆಗಿವೆ. ಅದಕ್ಕೂ ಬಿಜೆಪಿ ಆರ್​ಎಸ್​ಎಸ್‌ನವರೇ ಕಾರಣ. ಪರೇಶ್​ ಮೇಸ್ತಾ ಕೊಲೆಯಾದಾಗ ದೊಡ್ಡ ಗಲಾಟೆ ಮಾಡಿದ್ದರು. ಪ್ರಕರಣವನ್ನು ಸಿಬಿಐಗೆ ವಹಿಸಿದೆವು. ಬಳಿಕ ಆತನ‌ ಸಾವು ಸಹಜ‌ ಸಾವು ಎಂದು ತನಿಖೆಯಲ್ಲಿ ಬಯಲಾಯ್ತು. ಇದೇ ರೀತಿ 8 ಪ್ರಕಣಗಳನ್ನು ಸಿಬಿಐಗೆ ತನಿಖೆಗೆ ನೀಡಿದ್ದೆವು. ಬಿಜೆಪಿಯವರು ಸುಳ್ಳು ಹೇಳ್ತಾರೆ, ಅವರು ಹೇಳುವ ಸುಳ್ಳಿಗೆ ಉತ್ತರ ಕೊಡ್ತಾ ಕೂರಕ್ಕಾಗಲ್ಲ" ಎಂದು ಹರಿಹಾಯ್ದರು.

ಸಿ.ಟಿ.ರವಿ ವಿರುದ್ದ ವಾಗ್ದಾಳಿ: ಕಾಂಗ್ರೆಸ್​ಗೆ ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ವ್ಯತ್ಯಾಸವೇ ಗೊತ್ತಿಲ್ಲ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರವಾಗಿ ಮಾತನಾಡಿ, "ಇವರು ಆರ್​ಎಸ್​ಎಸ್ ಗಿರಾಕಿಗಳು, ಬರೀ ಸುಳ್ಳು ಹೇಳುವುದೇ ಇವರ ಕೆಲಸ. ನಾನು ಹಿಂದೂ ಧರ್ಮದವನು. ಹಿಂದೂ ಧರ್ಮದ ಬಗ್ಗೆ ನಾನು ಮಾತಾಡಿಯೇ ಇಲ್ಲ, ವಿರೋಧ ಮಾಡಿಲ್ಲ, ನಾವೆಲ್ಲಾ ಹಿಂದುಗಳೇ. ನಾವೆಲ್ಲಾ ಹಿಂದು ಧರ್ಮ ಪಾಲನೆ ಮಾಡವವರು. ಯಾವ ಧರ್ಮದಲ್ಲೂ ಕ್ರೌರ್ಯ, ಹಿಂಸೆಗೆ ಅವಕಾಶ ಇಲ್ಲ ಎಂದು ನಾನು ಹೇಳಿದೆ ಅಷ್ಟೇ. ಯಾವುದೇ ಧರ್ಮ ಹಿಂಸೆಗೆ ಪ್ರಚೋದನೆ ನೀಡಿದರೆ ಅದಕ್ಕೆ ಧರ್ಮದ ಹೆಸರು ಕೊಡುವುದು ಸರಿಯಲ್ಲ. ಸಮಾಜದ ಸಾಮರಸ್ಯ ಹಾಳು ಮಾಡುವುದೇ ಬಿಜೆಪಿಯವರ ಕೆಲಸ" ಎಂದು ವಾಗ್ದಾಳಿ ನಡೆಸಿದರು.

ಪಾಕಿಸ್ತಾನದಲ್ಲಿ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ 150 ಸೀಟ್ ಗೆಲ್ಲಬಹುದೇನೋ ಎಂಬ ಸಿ.ಟಿ.ರವಿ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ, "ಕರ್ನಾಟಕ ಏನು ಪಾಕಿಸ್ತಾನದಲ್ಲಿ ಇದೆಯೇನ್ರಿ?, ಚುನಾವಣೆ ನಡೀತಿರೋದು ಪಾಕಿಸ್ತಾನದಲ್ಲಿ ಅಲ್ಲ, ಕರ್ನಾಟಕದಲ್ಲಿ" ಎಂದರು.

ಇದನ್ನೂ ಓದಿ: ಹಾವೇರಿ... ಕಾಂಗ್ರೆಸ್ ಮುಳುಗುತ್ತಿರುವ ಹಡಗು : ಸಿಟಿ ರವಿ ಟೀಕೆ

Last Updated : Feb 7, 2023, 6:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.