ಕಲಬುರಗಿ : ಪೌರತ್ವ ಮಸೂದೆ ಜಾರಿ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಗಲಭೆಗಳ ಹಿಂದೆ ಪಾಕಿಸ್ತಾನದ ಕುತಂತ್ರ ಇದೆ ಎಂದು ಶ್ರೀರಾಮ ಸೇನಾ ರಾಜ್ಯ ಉಪಾಧ್ಯಕ್ಷ ಆಂದೋಲ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಜಿಲ್ಲೆಯ ಮಠಾಧೀಶರಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು. ಸಿಎಬಿ ಮಸೂದೆ ವಿರೋಧಿಸಿ ಕೆಲವೊಂದು ಮತಾಂದ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿವಿ ವಿದ್ಯಾರ್ಥಿಗಳು ಅನಾಗರಿಕರ ಅಲ್ಲ, ದೆಹಲಿಯಲ್ಲಿ ಕೆಲ ವಿವಿಯ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿರುವದು ಖಂಡನಿಯ ಎಂದು ಆಕ್ರೋಶ ಹೊರಹಾಕಿದರು.
ದೇಶದಲ್ಲಿ ಅಸ್ಥಿರತೆ ಮೂಡಿಸಲು ಕೆಲ ಮತಾಂಧ ಸಂಘಟನೆಗಳು ಪ್ರಯತ್ನ ಮಾಡುತ್ತಿವೆ, ಪ್ರಧಾನಿ ಮೋದಿಯವರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು, ಪೌರತ್ವ ಮಸೂದೆ ಮತ್ತೆ ತಿದ್ದುಪಡಿ ಮಾಡುವುದಾಗಲಿ ಅಥವಾ ಬದಲಾವಣೆ ಮಾಡುವದಾಗಲಿ ಮಾಡಬಾರದೆಂದು ಎಂದು ಜಿಲ್ಲೆಯ ಮಠಾಧೀಶರ ಪರವಾಗಿ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೆವೂರ್ ಶ್ರೀಕಂಠ ಶಿವಾಚಾರ್ಯರು, ಚಿಟಗುಪ್ಪ ಗುರುಲಿಂಗ ಶಿವಾಚಾರ್ಯ, ಅಷ್ಟಗಿ ನಿಜಲಿಂಗ ಶಿವಾಚಾರ್ಯ, ಕಲಬುರಗಿಯ ಲಿಂಗರಾಜಪ್ಪ ಸೇರಿದಂತೆ ವಿವಿಧ ಮಠಾಧೀಶರು, ಸಾಮಜಪರ ಸೇವರು ಸುದ್ದಿಗೊಷ್ಟಿಯಲ್ಲಿದ್ದರು.