ETV Bharat / state

ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ: ಬಿಜೆಪಿ ವಿರುದ್ಧ ಮಾಜಿ ಸಚಿವ ಶರಣ ಪ್ರಕಾಶ್​​ ಪಾಟೀಲ್ ಆಕ್ರೋಶ

ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್​ ಎಂಎಲ್ಎ. ಆದರೆ, ಯುವಕರ ಗತಿಯೇನು. ಶಾಸಕ ಬಸವರಾಜ್ ಮತ್ತಿಮೂಡ್​​ ವಿರುದ್ಧ ಈ ಹಿಂದೆ 12 ಪ್ರಕರಣಗಳಿದ್ದು, ಈಗ ಅವರ ಪತ್ನಿಯ ಕಾರೇ ಸೀಜ್ ಆಗಿದೆ..

sharana prakash patil
ಮಾಜಿ ಸಚಿವ ಶರಣ ಪ್ರಕಾಶ್​​ ಪಾಟೀಲ್
author img

By

Published : Nov 20, 2020, 3:17 PM IST

ಕಲಬುರಗಿ: ಕ್ರಿಕೆಟ್ .ಬೆಟ್ಟಿಂಗ್ ದಂಧೆಕೋರರಿಗೆ ಎಂಎಲ್​​ಎ ಟಿಕೆಟ್ ನೀಡಿದ ಬಿಜೆಪಿಯವರಿಗೆ ಮಾನ, ಮರ್ಯಾದೆಯಿಲ್ಲ ಎಂದು ಮಾಜಿ ಸಚಿವ ಶರಣ ಪ್ರಕಾಶ್​​ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಶಾಸಕರ ಪತ್ನಿಯ ಕಾರು ಸೀಜ್ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶರಣಪ್ರಕಾಶ್ ಪಾಟೀಲ್, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಗೆ ಎಂಎಲ್​​ಎ ಟಿಕೆಟ್ ನೀಡಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್​ ಎಂಎಲ್ಎ. ಆದರೆ, ಯುವಕರ ಗತಿಯೇನು. ಶಾಸಕ ಬಸವರಾಜ್ ಮತ್ತಿಮೂಡ್​​ ವಿರುದ್ಧ ಈ ಹಿಂದೆ 12 ಪ್ರಕರಣಗಳಿದ್ದು, ಈಗ ಅವರ ಪತ್ನಿಯ ಕಾರೇ ಸೀಜ್ ಆಗಿದೆ ಎಂದು ಟೀಕಿಸಿದರು.

ಮಾಜಿ ಸಚಿವ ಶರಣ ಪ್ರಕಾಶ್​​ ಪಾಟೀಲ್

ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಸಹಿಸಲ್ಲ: ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್ ಮತ್ತಿತರರು ಬೆಟ್ಟಿಂಗ್ ಪ್ರಕರಣವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಮಾಲೀಕಯ್ಯ ಅಂತಹ ಹಿರಿಯ ನಾಯಕರಿಂದ ಇದನ್ನ ನಿರೀಕ್ಷಿಸಿರಲಿಲ್ಲ. ಬೆಟ್ಟಿಂಗ್ ದಂಧೆಕೋರರನ್ನು ಸಮರ್ಥಿಸಿಕೊಳ್ಳೋದು ನೈತಿಕವಾಗಿ ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದರು.

ಪ್ರತಿಯೊಂದಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ತಮ್ಮ ಸ್ವಯಂಕೃತ ಅಪರಾಧಗಳಿಂದಾಗಿ ಮಾಲೀಕಯ್ಯ ರಾಜಕೀಯ ಸ್ಥಾನಮಾನ ಕಳೆದುಕೊಂಡಿದ್ದಾರೆ. ಅವರು ರಾಜಕೀಯವಾಗಿ ಬೆಳೆದದ್ದೇ ಮಲ್ಲಿಕಾರ್ಜುನ ಖರ್ಗೆ ಪ್ರೋತ್ಸಾಹದಿಂದ ಎನ್ನುವ ವಿಚಾರವನ್ನು ಮರೆಯಬಾರದು.

ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನೆ ಕೂರಲ್ಲ ಎಂದು ಮಾಲೀಕಯ್ಯ ಗುತ್ತೇದಾರ್​​ಗೆ ಶರಣಪ್ರಕಾಶ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.