ಕಲಬುರಗಿ: ಕೊರೊನಾ ರುದ್ರನರ್ತನಕ್ಕೆ ಜಿಲ್ಲೆಯ ಜನರು ಬೆಚ್ಚಿ ಬೀಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಮೃತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲ್ಲಿದ್ದು, ಮತ್ತೆ ಏಳು ಸೋಂಕಿತರು ಬಲಿಯಾಗಿದ್ದಾರೆ.
ಕಲಬುರಗಿಯ ಓಂ ನಗರದ ನಿವಾಸಿ 73 ವರ್ಷದ ವೃದ್ಧ (ಪಿ-48.519) ಜು.15 ರಂದು ಆಸ್ಪತ್ರೆಗೆ ದಾಖಲಾಗಿ ಜು.18ರಂದು ನಿಧನ ಹೊಂದಿದ್ದಾರೆ. ಎಂ.ಎಸ್.ಕೆ.ಮಿಲ್ ಪ್ರದೇಶದ 60 ವರ್ಷದ ವೃದ್ಧೆ (ಪಿ-57,356) ಜು.11ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ. ಯಾದಗಿರಿ ಜಿಲ್ಲೆಯ ಹಳೆ ಮಾರ್ಕೆಟ್ ಪ್ರದೇಶದ 55 ವರ್ಷದ ಪುರುಷ (ಪಿ-57,634) ಜು.15ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದಾರೆ. ಯಾದಗಿರಿ ನಗರದ ಆರ್.ವಿ. ಶಾಲೆ ರಸ್ತೆ ಪ್ರದೇಶದ 59 ವರ್ಷದ ಪುರುಷ (ಪಿ-58,008) ಜು.16ರಂದು ಆಸ್ಪತ್ರೆಗೆ ದಾಖಲಾಗಿ ಜು.26 ರಂದು ನಿಧನರಾದರು.
ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ ಗ್ರಾಮದ 68 ವರ್ಷದ ಪುರುಷ (ಪಿ-75,175) ಜು.5 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ. ಕಲಬುರಗಿ ನಗರದ ಗಣೇಶ ನರ್ಸಿಂಗ್ ಹೋಮ್ ಹಿಂದುಗಡೆ ಪ್ರದೇಶದ 68 ವರ್ಷದ ವೃದ್ಧ (ಪಿ-79,614) ಜು.21ರಂದು ಆಸ್ಪತ್ರೆಗೆ ದಾಖಲಾಗಿ ಜು.27ರಂದು ನಿಧನ ಹೊಂದಿದ್ದಾರೆ. ಕಾಕಡೆ ಚೌಕ್ ಪ್ರದೇಶದ 60 ವರ್ಷದ ವೃದ್ಧೆ (ಪಿ-1,02,058) ಜು.15ರಂದು ಆಸ್ಪತ್ರೆಗೆ ದಾಖಲಾಗಿ ಜು.27ರಂದು ನಿಧನ ಹೊಂದಿದ್ದಾರೆ. ಎಲ್ಲರೂ ತೀವ್ರ ಉಸಿರಾಟ ಸಮಸ್ಯೆ ಹಾಗೂ ಇತರೆ ಖಾಯಿಲೆಗಳಿಂದ ನಿಧನರಾಗಿದ್ದಾರೆ.
ಇಂದು 220 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 124 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 5,166 ಇದ್ದು, ಗುಣಮುಖರಾದವರ ಸಂಖ್ಯೆ 2,553ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 89ಕ್ಕೆ ಏರಿಕೆಯಾಗಿದೆ. ಸದ್ಯ 2,524 ಪ್ರಕರಣಗಳು ಸಕ್ರಿಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.