ETV Bharat / state

ಸರಣಿ ಮನೆಗಳ್ಳತನ : ನಗದು, ಚಿನ್ನಾಭರಣ ದೋಚಿ ಕಳ್ಳರು ಪರಾರಿ - series house theft

ನಗರದ ವಿಜಯಕುಮಾರ್ ಎಂಬುವರ ಮನೆಯ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು, ಮಹಿಳೆಗೆ ಚಾಕು ತೋರಿಸಿ 20 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ..

kalaburagi
ಮನೆಗಳ್ಳತನ
author img

By

Published : Dec 26, 2020, 11:03 AM IST

ಕಲಬುರಗಿ : ಇಲ್ಲಿನ ರಾಘವೇಂದ್ರ ನಗರದಲ್ಲಿ ಸರಣಿ ಮನೆಗಳ್ಳತನ ನಡೆದಿದ್ದು, ಹಣ ಹಾಗೂ ಬಂಗಾರ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಸರಣಿ ಮನೆ ಕಳ್ಳತನ

ನಗರದ ವಿಜಯಕುಮಾರ್ ಎಂಬುವರ ಮನೆಯ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು, ಮಹಿಳೆಗೆ ಚಾಕು ತೋರಿಸಿ 20 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ನಂತರ ಮಹಾದೇವ ಚೆನ್ನಕಿ ಎನ್ನುವರ ಮನೆಗೂ ನುಗ್ಗಿ 10 ಸಾವಿರ ರೂಪಾಯಿ ನಗದು, 200 ಗ್ರಾಂ ಬೆಳ್ಳಿ ಆಭರಣ ಕದ್ದಿದ್ದಾರೆ.

ಬಳಿಕ ಇದೇ ಪ್ರದೇಶದ ಮತ್ತೆರಡು ಮನೆಗಳಿಗೆ ಕನ್ನ ಹಾಕಿ 25 ಸಾವಿರ ರೂಪಾಯಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಓದಿ: ದೆಹಲಿಯ ಮಾಸ್ಕ್​ ತಯಾರಿಕಾ ಘಟಕದಲ್ಲಿ ಬೆಂಕಿ : ಓರ್ವ ಅಗ್ನಿಗಾಹುತಿ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.