ETV Bharat / state

ಹಿರಿಯ ರಂಗಕರ್ಮಿ ಲಾಲ್ ಮಹ್ಮದ ಬಂದೇನವಾಜ ಖಲೀಫ್ ಇನ್ನಿಲ್ಲ - ಹಿರಿಯ ರಂಗಕರ್ಮಿ ಲಾಲ್ ಮಹ್ಮದ ಬಂದೇನವಾಜ ಖಲೀಫ್ ಸಾವು,

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಂಗಕರ್ಮಿ ಲಾಲ್ ಮಹ್ಮದ ಬಂದೇನವಾಜ ಖಲೀಫ್ ನಿಧನರಾಗಿದ್ದಾರೆ.

Lal Maham Bandenavaja Khalif no more, senior Drama artist Lal Maham Bandenavaja Khalif no more in Kalaburagi, senior Drama artist Lal Maham Bandenavaja Khalif no more, Lal Maham Bandenavaja Khalif, senior Drama artist Lal Maham Bandenavaja Khalif, ಲಾಲ್ ಮಹ್ಮದ ಬಂದೇನವಾಜ ಖಲೀಫ್ ಇನ್ನಿಲ್ಲ, ಹಿರಿಯ ರಂಗಕರ್ಮಿ ಲಾಲ್ ಮಹ್ಮದ ಬಂದೇನವಾಜ ಖಲೀಫ್ ಇನ್ನಿಲ್ಲ, ಹಿರಿಯ ರಂಗಕರ್ಮಿ ಲಾಲ್ ಮಹ್ಮದ ಬಂದೇನವಾಜ ಖಲೀಫ್ ಸಾವು, ಕಲಬುರಗಿ ಸುದ್ದಿ,
ಬಂದೇನವಾಜ ಖಲೀಫ್ ಇನ್ನಿ
author img

By

Published : Apr 13, 2021, 4:49 AM IST

Updated : Apr 13, 2021, 6:07 AM IST

ಕಲಬುರಗಿ: ಹಿರಿಯ ರಂಗಕರ್ಮಿ, ಎಲ್.ಬಿ.ಕೆ ಅಲ್ದಾಳ ಅಂತಾನೇ ಚಿರಪರಿಚಿತರಾದ ಲಾಲ್ ಮಹ್ಮದ ಬಂದೇನವಾಜ ಖಲೀಫ್ (85) ಇಹಲೋಕ ತೈಜಿಸಿದ್ದಾರೆ.

ಎಲ್.ಬಿ.ಕೆ ಅಲ್ದಾಳ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಂಗಳವಾರ (ಏ.13) ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನೆರವೇರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಂದೇನವಾಜ ಹಿನ್ನೆಲೆ...

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬನ್ನಹಟ್ಟಿ ಗ್ರಾಮದಲ್ಲಿ ಬಂದೇನವಾಜ ಹಾಗೂ ಹುಸೇನಬಿ ದಂಪತಿಗಳಿಗೆ 05-11-1938 ರಲ್ಲಿ ಜನಿಸಿದ ಎಲ್‌ಬಿಕೆ ಅಲ್ದಾಳ ಅವರು, ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ತವರಾದ ಶಹಾಪುರ ತಾಲೂಕಿನ ಆಲ್ದಾಳದಲ್ಲಿ ಬಂದು ನೆಲೆಸಿದರು.

ಊಟಕ್ಕೂ ಗತಿಯಿಲ್ಲದೆ ಬಡತನದಲ್ಲಿ ಬೆಂದ ಅವರು, ಕಷ್ಟದಲ್ಲಿಯೇ ಸಾಹಿತ್ಯ ಪ್ರೇಮ, ನಾಟಕ ಪ್ರೇಮ ಬೆಳೆಸಿಕೊಂಡಿದ್ದರು. 1962 ರಲ್ಲಿ ರಂಗ ನಾಟಕ ರಚನೆ ಹಾಗೂ ರಂಗ ನಿರ್ದೇಶನ ಬರೆಯಲು ಪ್ರಾರಂಭಿಸಿದರು. ನಂತರ ಅವರು ಹಿಂದುರಿಗಿ ನೋಡಿದವರೆ ಅಲ್ಲಾ. 125 ಕೃತಿಗಳು, ಹಲವು ನಾಟಕಗಳು, ಪುಸ್ತಕಗಳು ಬರೆದು ಲೋಕಕ್ಕೆ ಅರ್ಪಣೆ ಮಾಡಿದರು. 2001 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2012 ರಲ್ಲಿ ಕರ್ನಾಟಕ ನಾಟಕ ಆಕಾಡೆಮಿ ಪುರಸ್ಕಾರ, 2013 ಗುಬ್ಬಿ ವೀರಣ್ಣ ಪ್ರಶಸ್ತಿ ಹೀಗೆ ಸಾಲು ಸಾಲು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಶರಣ ಸಾಹಿತ್ಯವನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿದ್ದಲ್ಲದೆ, ಶರಣರ ಕುರಿತು ರಚಿಸಿದ ನಾಟಕಗಳಿಂದ ಅವರು ಹೆಚ್ಚು ಪ್ರಚಾರಕ್ಕೆ ಬಂದರು. ಎಲ್ಲ ಸಮುದಾಯಗಳ ಪ್ರತಿನಿಧಿಯಂತೆ, ಯಾವುದೇ ಸಾಮಾಜಿಕ ಚೌಕಟ್ಟಿಗೆ ಒಳಗಾಗದೆ ಬದುಕಿದ ಅವರ ಜೀವನವು ಮಾದರಿಯಾಗಿದ್ದರು. ಇವತ್ತು ತಮ್ಮ ನೆಚ್ಚಿನ ಕ್ಷೇತ್ರದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

Last Updated : Apr 13, 2021, 6:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.