ETV Bharat / state

ಸೇಡಂ: ಕರ್ತವ್ಯ ಲೋಪ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಎಡಿ ಅಮಾನತು - Social Welfare Department AD suspended

ಬೇಜವಾಬ್ದಾರಿ ಮತ್ತು ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಕಾಂತ ನಂದಿಕೂರ್ ಅವರನ್ನು ಅಮಾನತು ಮಾಡಲಾಗಿದೆ.

Shashikanta Nandikoor
Shashikanta Nandikoor
author img

By

Published : Aug 16, 2020, 6:56 PM IST

ಸೇಡಂ: ಬೇಜವಾಬ್ದಾರಿ ಮತ್ತು ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಕಾಂತ ನಂದಿಕೂರ್ ಅವರನ್ನು ಅಮಾನತು ಮಾಡಿ ಇಲಾಖೆಯ ಆಯುಕ್ತ ಡಾ. ರವಿಕುಮಾರ ಸುರಪುರ ಆದೇಶ ಹೊರಡಿಸಿದ್ದಾರೆ.

ಶಶಿಕಾಂತ ನಂದಿಕೂರ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸದೆ, ಕಚೇರಿ ಕರ್ತವ್ಯಕ್ಕೆ ಹಾಜರಾಗದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳ ಜೊತೆ ಸಮನ್ವಯ ಸಾಧಿಸಲು ಕರ್ತವ್ಯ ಲೋಪ ಎಸಗಿದ್ದಾರೆ. ಅಲ್ಲದೇ ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಸೇಡಂಗೆ ಭೇಟಿ ನೀಡಿ ಇಲಾಖೆ ಅಡಿಯ ವಸತಿ ನಿಲಯಗಳನ್ನು ಉದ್ಘಾಟನೆ ಮಾಡುವ ಸಮಾರಂಭದಲ್ಲಿಯೂ ಸಹ ನಂದಿಕೂರ ಗೈರಾಗಿದ್ದಾರೆ. ಇದನ್ನು ಪರಿಗಣಿಸಿ ಅಮಾನತು ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.