ಸೇಡಂ: ಏಪ್ರಿಲ್ 5 ರಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ದೀಪಜ್ಯೋತಿ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಬೆಂಬಲಿಸುವಂತೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಕೋರಿದ್ದಾರೆ.
ದೇಶದ ಒಳಿತಿಗಾಗಿ ಮತ್ತು ಕರೊನಾ ಮಹಾಮಾರಿಯಿಂದ ಮುಕ್ತಿ ಪಡೆಯಲು ಪ್ರಧಾನಿಯವರು ಕರೆ ನೀಡಿದ್ದು, ಎಲ್ಲರೂ ಏಪ್ರೀಲ 5 ರಂದು ರಾತ್ರಿ 9ಘಂಟೆಗೆ 9 ನಿಮಿಷಗಳ ಕಾಲ ತಮ್ಮ ಮನೆಯ ಅಂಗಳದಲ್ಲಾಗಲಿ, ಕಿಟಕಿ, ಬಾಗಿಲಿ, ಬಾಲ್ಕೊನಿಗಳಲ್ಲಿ ದೀಪ, ಕ್ಯಾಂಡಲ್, ಮೊಬೈಲ್ ಟಾರ್ಚ್, ಬ್ಯಾಟರಿಯ ಬೆಳಕು ಹರಿಸುವ ಮೂಲಕ ಬೆಂಬಲಿಸುವಂತೆ ಕೋರಿದ್ದಾರೆ.