ಸೇಡಂ : ತಾಲೂಕಿನ ಕೋಡ್ಲಾ ಗ್ರಾಮದ ಸಮೀಪದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 50 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್‌ನ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಉದ್ಘಾಟಿಸಿದ್ದಾರೆ.
ರೋಗಿಗಳಿಗಾಗಿ ಕೈಗೊಂಡಿರುವ ಕ್ರಮಗಳು ಮತ್ತು ಸೌಲಭ್ಯಗಳ ಕುರಿತು ಪರಿಶೀಲಿಸಿದ ಅವರು, ಆಕ್ಸಿಜನ್ ಅವಶ್ಯಕತೆ ಇಲ್ಲದವರು ಮತ್ತು ಸಣ್ಣಪುಟ್ಟ ಸೋಂಕಿನ ಗುಣಲಕ್ಷಣ ಇರುವವರು ಹಾಗೂ ಮನೆಯಲ್ಲಿರಲು ಇಚ್ಚಿಸದವರಿಗೆ ಕೋವಿಡ್ ಕೇರ್ ಸೆಂಟರ್ ನೆರವಾಗಲಿದೆ.
ಇಲ್ಲಿ ನಿರಂತರವಾಗಿ ವೈದ್ಯರ ನಿಗಾ ಇರಲಿದೆ. ಜೊತೆಗೆ ಔಷಧಿಗಳ ಕಿಟ್, ಊಟ, ವಸತಿ ಕಲ್ಪಿಸಲಾಗುತ್ತದೆ ಎಂದರು. ಕೊರೊನಾ ವಾರಿಯರ್ಸ್ಗಳಿಗಾಗಿಯೇ ಸೇಡಂನ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಕೋವಿಡ್ ಕೇರ್ ಸೆಂಟರ್‌ನಲ್ಲಿ ಬೆಡ್ಗಳನ್ನು ಕಾಯ್ದಿರಿಸಲಾಗಿದೆ.
ಜನರು ಯಾವುದೇ ರೀತಿಯ ದುಗುಡ, ದುಮ್ಮಾನಗಳಿಗೆ ಒಳಗಾಗದೆ ಸರ್ಕಾರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಈ ವೇಳೆ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಸಿಪಿಐ ರಾಜಶೇಖರ ಹಳಗೋದಿ, ಪ್ರಿಯಾಂಕ ವಿಭೂತಿ, ಬಸವರಾಜ, ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.