ಸೇಡಂ: ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ತಂದೆ ವೀರಶೆಟ್ಟೆಪ್ಪಾ ಪೊಲೀಸ್ ಪಾಟೀಲ (85) ಭಾನುವಾರ ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕೆಲ ದಿನಗಳ ಹಿಂದೆ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿತ್ತು. ಭಾನುವಾರ ಅವರು ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ರಾತ್ರಿ ಸ್ವಗ್ರಾಮ ತೇಲ್ಕೂರದಲ್ಲೇ ನಡೆಯಲಿದ್ದು, ಕೊರೊನಾ ಅಟ್ಟಹಾಸದ ಈ ಸಂದರ್ಭದಲ್ಲಿ ಯಾರೂ ಸಹ ಗ್ರಾಮಕ್ಕೆ ಬಾರದಂತೆ ಶಾಸಕ ರಾಜಕುಮಾರ ಪಾಟೀಲ ಕೋರಿದ್ದಾರೆ.