ಸೇಡಂ: ತಾಲೂಕಿನ ಮಳಖೇಡ ಗ್ರಾಮದ ಸಿಮೆಂಟ್ ಕಾರ್ಖಾನೆಯೊಂದರ ಬಳಿ ಸಿಂಹವೊಂದು ಪ್ರತ್ಯಕ್ಷವಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕುರಿತಾಗಿ ಯೂಟ್ಯೂಬ್ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ಮಳಖೇಡದಲ್ಲ. ಬದಲಿಗೆ ಅದು ಗುಜರಾತ್ ಹಾಗೂ ತಮಿಳುನಾಡಿನದ್ದು ಎಂದು ಯೂಟ್ಯೂಬ್ ತಿಳಿಸಿದೆ. ಹಾಗಾಗಿ ಜನರು ನಿರಾಳರಾಗಬಹುದು.
ಈ ವಿಡಿಯೋ ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಅನೇಕ ಕಡೆಗಳಲ್ಲಿ ಹರಿದಾಡುತ್ತಿದ್ದು ಜನರ ಆತಂಕ ಹೆಚ್ಚಿಸಿತ್ತು. ವಿಡಿಯೋದಲ್ಲಿರುವ ಸಿಮೆಂಟ್ ಕಾರ್ಖಾನೆಯು ರಾಜಶ್ರೀ ಸಿಮೆಂಟ್ ಕಾರ್ಖಾನೆಯನ್ನೇ ಹೋಲುವಂತಿತ್ತು.
ಇದನ್ನೂ ಓದಿ: ಸಾಕು ನಾಯಿಗೆ ಕಚ್ಚಿದೆ ಅಂತ ಬೀದಿ ನಾಯಿಯನ್ನ ಕೊಂದ ಕ್ರೂರಿ; ಕೇಸ್ ದಾಖಲು