ETV Bharat / state

ಕಲಬುರಗಿಯಲ್ಲಿ ಕೊರೊನಾಸುರನಿಗೆ 2ನೇ ಬಲಿ: ರಾಜ್ಯದಲ್ಲಿ ಐದಕ್ಕೇರಿದ ಸಾವಿನ ಸಂಖ್ಯೆ - ಕಲಬುರಗಿಯಲ್ಲಿ ಕೊರೊನಾ ಸಾವು

ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಕಲಬುರಗಿಯಲ್ಲಿ ಕೊರೊನಾಗೆ ಸೋಂಕಿನಿಂದ ಇದು ಎರಡನೇ ಸಾವು ಆಗಿದ್ದು, ಜಿಲ್ಲಾದ್ಯಂತ ಮತ್ತೆ ಕಟ್ಟೆಚ್ಚರ ವಹಿಸಲಾಗಿದೆ.

corona
ಕೊರೊನಾ
author img

By

Published : Apr 8, 2020, 4:25 PM IST

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿಯಾಗಿದೆ. ನಗರದ ಸಂತ್ರಸವಾಡಿ ನಿವಾಸಿ 65ರ ವೃದ್ಧ ಕೊರೊನಾಗೆ ಮೃತಪಟ್ಟಿದ್ದಾನೆ. ಹಣ್ಣು, ತರಕಾರಿ ವ್ಯಾಪಾರ ಮಾಡುತ್ತಿದ್ದ ವೃದ್ಧ ಅನಾರೋಗ್ಯದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆ ಪಡೆದಿದ್ದ. ಕೊರೊನಾ ಶಂಕೆಯಿಂದಾಗಿ ನಗರದ ಇಎಸ್ಐ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನ ಗಂಟಲು ದ್ರವವನ್ನು ಪರೀಕ್ಷಿಸಲು ಸ್ಯಾಂಪಲ್ ರವಾನಿಸಲಾಗಿತ್ತು.

ಈ ನಡುವೆ ನಿನ್ನೆ ವೃದ್ಧ ಸಾವನ್ನಪ್ಪಿದ್ದು, ಸ್ಯಾಂಪಲ್ ವರದಿಯಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಮೃತನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯನ್ನು ಜಿಲ್ಲಾಡಳಿತ ಬಂದ್ ಮಾಡಿದೆ. ಆಸ್ಪತ್ರೆಯ 4 ಜನ ನರ್ಸ್​​ಗಳು ಹಾಗೂ ಓರ್ವ ವೈದ್ಯನನ್ನು ಇಎಸ್ಐ ಆಸ್ಪತ್ರೆಯ ಕ್ವಾರಂಟೈನ್​ಗೆ ರವಾನಿಸಲಾಗಿದೆ. ಮೃತ ವ್ಯಕ್ತಿಯ ಮನೆ ಸುತ್ತಮುತ್ತ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

corona cases
ಕೊರೊನಾ ಸೋಂಕಿತರ ಪಟ್ಟಿ

ಈಗ ಸೋಂಕಿಗೆ ಬಲಿಯಾಗಿರುವ ವೃದ್ಧನ ಟ್ರಾವೆಲ್ ಹಿಸ್ಟರಿ ಕಂಡು ಬಂದಿಲ್ಲ. ಆದರೂ ಕೊರೊನಾ ತಗುಲಿದ್ದು ಹೇಗೆ?, ಕಲಬುರಗಿಯಲ್ಲಿ ಸೋಂಕು ಹರಡುವಿಕೆ ಮೂರನೇ ಹಂತಕ್ಕೆ ತಲುಪಿದೆಯಾ? ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

ಅಲ್ಲದೆ ಕೊರೊನಾ ಪೀಡಿತ 175ನೇ ರೋಗಿಯ ತಾಯಿಯಾದ 72 ವರ್ಷದ ಮಹಿಳೆಯಲ್ಲಿಯೂ ಕೊರೊನಾ ದೃಢಪಟ್ಟಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 9 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.