ಕಲಬುರಗಿ: ಭಾರೀ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ನಾಲ್ವರು ಅರ್ಧ ಗಂಟೆಗೂ ಹೆಚ್ಚು ಸಮಯ ಅವಶೇಷಗಳಡಿ ಸಿಲುಕಿ ನರಳಾಡಿದ ಘಟನೆ ಇಲ್ಲಿನ ಗಾಜಿಪೂರ ಬಡಾವಣೆಯ ಅತ್ತರ ಕಾಂಪೌಂಡ್ ಬಳಿ ನಡೆದಿದೆ.
ಬಾಬುರಾವ ವಾಂಗೆ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಇಲ್ಲಿ ಬಾಡಿಗೆದಾರರು ವಾಸವಿದ್ದರು. ನಸುಕಿನ ಜಾವ ನಿದ್ದೆಯಲ್ಲಿದ್ದ ವೇಳೆ ಛಾವಣಿ ಕುಸಿದಿದ್ದು, ನಾಲ್ವರು ಅವಶೇಷಗಳಡಿ ಸಿಲುಕಿ ಕೆಲ ಹೊತ್ತು ನರಳಾಡಿದರು. ಬಳಿಕ ಅವರನ್ನು ರಕ್ಷಿಸಲಾಯಿತು.
ಘಟನೆಯಲ್ಲಿ ಸಿದ್ದರಾಮ ಎಂಬುವರ ತಲೆ ಹಾಗೂ ಅಕ್ಷಯ ಎಂಬುವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಇನ್ನಿಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ನೀಡಲಾಗಿದೆ. ಬ್ರಹ್ಮಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.