ETV Bharat / state

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟೆಂಪೋ ಟ್ರಾವೆಲರ್: ಚಾಲಕ ಸೇರಿ ಇಬ್ಬರ ದುರ್ಮರಣ - ಕಲಬುರಗಿ ರಸ್ತೆ ಅಪಘಾತ

ನಿದ್ದೆಯ ಮಂಪರಿನಲ್ಲಿದ್ದ ಟೆಂಪೋ ಟ್ರಾವೆಲರ್ ವಾಹನದ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿಯ ಜೇವರ್ಗಿ ಹತ್ತಿರ ನಡೆದಿದೆ.

accident
ಅಪಘಾತ
author img

By

Published : Dec 24, 2022, 9:08 AM IST

ಕಲಬುರಗಿ: ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜೇವರ್ಗಿ ಹತ್ತಿರದ ಗೌನಳ್ಳಿ ಕ್ರಾಸ್ ಬಳಿ ನಡೆದಿದೆ. ತಾಲೂಕಿನ ಹಾಗರಗುಂಡಗಿ ಗ್ರಾಮದ ಸಂಜೀವಕುಮಾರ ವಜಾಪುರ್ (30) ಹಾಗೂ ಟೆಂಪೋ ಟ್ರಾವೆಲರ್ ಚಾಲಕ ಅಪ್ಪರಾಯ ಬಿರಾದಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಿಟಿ ವಾಹನದಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ನಿದ್ರೆ ಮಂಪರಿನಲ್ಲಿದ್ದ ಟಿಟಿ ವಾಹನದ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಟೆಂಪೋ ಟ್ರಾವೆಲರ್ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ವಾಹನದಡಿ ಸಿಲುಕಿದ್ದ ಡ್ರೈವರ್​ನ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ.

ಹಾಗರಗುಂಡಗಿ ಗ್ರಾಮದ ಒಂದೇ ಕುಟುಂಬದವರಾದ ಇವರು, ಕಳೆದ ಒಂದು ವಾರದ ಹಿಂದೆ ಕರ್ನಾಟಕ ಯಾತ್ರೆಗೆ ತೆರಳಿ ವಾಪಸ್​ ಮರಳುತ್ತಿದ್ದರು. ಊರ ಸಮೀಪದಲ್ಲೇ ದುರ್ಘಟನೆ ಸಂಭವಿಸಿದ್ದು, ಎಲ್ಲ ಅಂದುಕೊಂಡಂತೆ ಆಗಿದ್ದರೆ ಇನ್ನೂ ಅರ್ಧ ಗಂಟೆಯಲ್ಲಿ ಗ್ರಾಮ ಸೇರುತ್ತಿದ್ದರು. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಂದಕಕ್ಕೆ ಉರುಳಿ ಬಿದ್ದ ವಾಹನ.. ಶಬರಿಮಲೆಗೆ ತೆರಳುತ್ತಿದ್ದ 8 ಮಂದಿ ಅಯ್ಯಪ್ಪ ಭಕ್ತರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.