ಸೇಡಂ: ತಾಲೂಕಿನ ಕುರಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಗೆ ಲಿಫ್ಟ್ ನೀಡುವ ನೆಪದಲ್ಲಿ ವ್ಯಕ್ತಿಯೋರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ಇಳಿಹೊತ್ತಲ್ಲಿ ಸೇಡಂನಿಂದ ಆಟೋ ಮೂಲಕ ಕುರಕುಂಟಾ ಕ್ರಾಸ್ ಬಳಿ ಬಂದಿಳಿದಿದ್ದಾರೆ. ಸಂಜೆ ಬಸ್ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯಲ್ಲಿ ಆಕೆಯನ್ನು ಕಂಡ ವ್ಯಕ್ತಿಯೋರ್ವ ಸಹಾಯ ಮಾಡುವ ನೆಪವೊಡ್ಡಿ, ಬೈಕ್ ಹತ್ತಿಸಿಕೊಂಡಿದ್ದಾನೆ. ಸುಮಾರು 2-3 ಕಿ.ಮೀ. ದೂರದಲ್ಲಿರುವ ನಾಲಾ ಬ್ರಿಡ್ಜ್ ಬಳಿ ಮಹಿಳೆಗೆ ಚಾಕು ತೋರಿಸಿ, ಹೆದರಿಸಿ, ಬ್ರಿಡ್ಜ್ ಕೆಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಪ್ರಕರಣ ನಡೆದು 15 ದಿನ ಕಳೆದಿದ್ದು, ಮಹಿಳೆ ಮಾನಸಿಕವಾಗಿ ನೊಂದು, ಎಲ್ಲೂ ಸಹ ದೂರು ದಾಖಲಿಸಿಲ್ಲ. ಕಡೆಗೆ ಮಹಿಳಾ ಆಯೋಗಕ್ಕೆ ಆನ್ಲೈನ್ ಮೂಲಕ ತನಗಾದ ಅನ್ಯಾಯ ತೋಡಿಕೊಂಡಿದ್ದಾರೆ. ಬಳಿಕ ಮಹಿಳಾ ಆಯೋಗದಿಂದ ಸೇಡಂ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
ದೂರು ದಾಕಲಿಸಿಕೊಂಡು ತನಿಖೆ ಆರಂಭಿಸಿದ ಸೇಡಂ ಮತ್ತು ಕುರಕುಂಟಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮದುವೆಗೆ ಅಕ್ಕ ಒಲ್ಲೆ ಎಂದಿದ್ದಕ್ಕೆ ತಂಗಿಯ ಕಿಡ್ನ್ಯಾಪ್ ಮಾಡಿದ..: ಮುಂದೇನಾಯ್ತು ಅಂತ ನೀವೇ ನೋಡಿ..