ETV Bharat / state

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳಿಗೆ ಹೆಚ್ಚಿದ ಲಾಬಿ: ಕಲಬುರಗಿ ಬಿಜೆಪಿಯಲ್ಲೂ ಪೈಪೋಟಿ - Rajya Sabha and Methodological Council Election

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯ ಕಾವು ಜೊರಾಗಿದೆ. ಕಲಬುರಗಿ ಜಿಲ್ಲೆಯವರಾದ ವಿಧಾನ ಪರಿಷತ್ ಹಿರಿಯ ಸದಸ್ಯ ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ತಿಪ್ಪಣ್ಣಪ್ಪ ಕಮಕನೂರ ಇದೇ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಈ ಎರಡೂ ಸ್ಥಾನಗಳಿಗಾಗಿ ಆಡಳಿತರೂಢ ಬಿಜೆಪಿ ನಾಯಕರ ಮಧ್ಯೆ ಪೈಪೋಟಿ ನಡೆದಿದೆ.

Kalaburagi
ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ
author img

By

Published : Jun 3, 2020, 4:20 PM IST

ಕಲಬುರಗಿ: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳಿಗೆ ಆಕಾಂಕ್ಷಿ ಅಭ್ಯರ್ಥಿಗಳು ತೀವ್ರ ಲಾಬಿ ನಡೆಸಿದ್ದಾರೆ. ಈ ನಡುವೆ ವಲಸಿಗರಿಗೆ ಮಣೆ ಹಾಕದೆ ಪಕ್ಷಕ್ಕೆ ನಿಷ್ಠರಾದವರ ನಾಮ ನಿರ್ದೇಶನ ಮಾಡುವಂತೆ ಜಿಲ್ಲಾ ಬಿಜೆಪಿಯಲ್ಲಿ ಒತ್ತಡ ಕೇಳಿಬಂದಿದೆ.

ರಾಜ್ಯದಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯ ಕಾವು ಜೊರಾಗಿದೆ.‌ ಜಿಲ್ಲೆಯವರಾದ ವಿಧಾನ ಪರಿಷತ್ ಹಿರಿಯ ಸದಸ್ಯ ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ತಿಪ್ಪಣ್ಣಪ್ಪ ಕಮಕನೂರ ಜೂನ್ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಈ ಎರಡೂ ಸ್ಥಾನಗಳಿಗಾಗಿ ಆಡಳಿತರೂಢ ಬಿಜೆಪಿ ನಾಯಕರು ಲಾಬಿ ನಡೆಸಿದ್ದಾರೆ. ಬೆಂಗಳೂರಿನಲ್ಲಿಯೇ ಬೀಡುಬಿಟ್ಟು ವಿಧಾನ ಪರಿಷತ್ ಸದಸ್ಯತ್ವದ ನಾಮ ನಿರ್ದೇಶನಕ್ಕಾಗಿ ತೀವ್ರ ಕಸರತ್ತು ನಡೆಸಿದ್ದಾರೆ.

Kalaburagi
ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳಿಗೆ ಆಕಾಂಕ್ಷಿ ಅಭ್ಯರ್ಥಿಗಳು

ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಉಮೇಶ್​ ಜಾಧವ್​ ಆಯ್ಕೆಯಾಗಲು ಕಾರಣರಾದ ಪ್ರಮುಖರ ಪಟ್ಟಿಯಲ್ಲಿರುವ ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ ಹಾಗೂ ಪಕ್ಷದ ನಾಯಕರ ಸೂಚನೆ ಮೇರೆಗೆ ಚಿಂಚೋಳಿ ಕ್ಷೇತ್ರವನ್ನೇ ಜಾಧವ್​ ಪುತ್ರ ಅವಿನಾಶ ಜಾಧವಗೆ ಬಿಟ್ಟುಕೊಟ್ಟ ಸುನಿಲ್ ವಲ್ಯಾಪುರೆ ಮಧ್ಯೆ ವಿಧಾನ ಪರಿಷತ್​ ನಾಮನಿರ್ದೇಶನದ ಭಾರೀ ಪೈಪೋಟಿ ಶುರುವಾಗಿದೆ.

ಸಂಸದ ಉಮೇಶ್ ಜಾಧವ್ ನೇತೃತ್ವದಲ್ಲಿ ಈಗಾಗಲೇ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಇತರೆ ನಾಯಕರನ್ನು ಭೇಟಿಯಾಗಿ ಮಾಜಿ ಸಚಿವ ಸುನಿಲ್ ವಲ್ಯಾಪುರೆ ಹಾಗೂ ಮಾಲೀಕಯ್ಯ ಗುತ್ತೇದಾರರಿಗೆ ನಾಮನಿರ್ದೇಶನ ಮಾಡಬೇಕೆಂದು ಒತ್ತಡ ತರಲಾಗಿದೆ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಕೂಡಾ ಲಾಬಿ ಆರಂಭಿಸಿದ್ದಾರೆ. ಆದ್ರೆ ಮಾಲಿಕಯ್ಯ ಗುತ್ತೇದಾರ ಕಾಂಗ್ರೆಸ್​ನಿಂದ ಇತ್ತೀಚೆಗೆ ಬಿಜೆಪಿಗೆ ಬಂದವರು. ಅವರಿಗೆ ಆದ್ಯತೆ ನೀಡುವುದಕ್ಕೆ ಮೂಲ ಬಿಜೆಪಿ ಕಾರ್ಯಕರ್ತರಿಂದ ಅಕ್ಷೇಪ ವ್ಯಕ್ತವಾಗಿದೆ.

ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರ ನಾಮನಿರ್ದೇಶನ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ. ಲಾಬಿ ನಡೆಸುತ್ತಿರುವ ನಾಯಕರಿಗೆ ವಿಧಾನಸಭೆ ಕ್ಷೇತ್ರವಿದೆ. ಹೀಗಿರಬೇಕಾದರೆ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಿಸೋದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ನಾಯಕರು ಯಾರಿಗೆ ಸ್ಥಾನಮಾನ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.