ಕಲಬುರಗಿ : ಇಂದು ಕಲಬುರಗಿ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದ್ದು ಜನರಲ್ಲಿ ಮಂದಹಾಸ ಮೂಡಿಸಿದೆ. ಬಿಸಿಲ ಬೇಗೆಗೆ ಬಸವಳಿದಿದ್ದ ಜನರಿಗೆ ಮಳೆಯಿಂದಾಗಿ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ.
ಈ ಬಾರಿ ಸರಿಸುಮಾರು 45* ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇಲ್ಲಿನ ಜನ ಇದರಿಂದ ಬಸವಳಿದು ಹೋಗಿದ್ದರು. ಮಳೆ ಇವಾಗ ಬರೋತ್ತೆ, ಆವಾಗ ಬರೋತ್ತೋ ಎಂದು ಮುಗಿಲಿನತ್ತವೇ ಮುಖಮಾಡಿ ನೋಡ್ತಿದ್ರು.
ಗಾಳಿಯ ರಭಸಕ್ಕೆ ಚದುರಿದ ಮೋಡ
ಕೆಲಕಾಲ ಮೋಡಕವಿದ ವಾತವರಣವಿದ್ದು, ರಭಸವಾಗಿ ಬೀಸಿದ ಗಾಳಿಯಿಂದ ಮೋಡ ಚದುರಿಹೋಗಿ ನಂತರ ಮಳೆಯ ಪ್ರಮಾಣ ಕಡಿಮೆಯಾಯಿತು. ಒಟ್ಟಾರೆಯಾಗಿ ಇಷ್ಟು ದಿನ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ರೈತರು ಮಳೆಯಿಂದಾಗಿ ಸ್ವಲ್ಪ ಖುಷಿ ಪಟ್ಟಿದ್ದಾರೆ.