ETV Bharat / state

ಕಲಬುರಗಿ: ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್​​​​ನಲ್ಲೇ ರೈಲ್ವೆ ಸಿಬ್ಬಂದಿ ಆತ್ಮಹತ್ಯೆ - ವಾಡಿ ರೈಲ್ವೆ ಪೊಲೀಸ್ ಠಾಣೆ

ರೈಲ್ವೆ ಇಲಾಖೆ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಾಡಿ ಪಟ್ಟಣದ ರೈಲ್ವೆ ಜಂಕ್ಷನ್‍ನಲ್ಲಿ ನಡೆದಿದೆ.

railway-employee-commits-suicide-in-kalaburagi
ಕಲಬುರಗಿ: ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್‍ನಲ್ಲೇ ರೈಲ್ವೆ ಸಿಬ್ಬಂದಿ ಆತ್ಮಹತ್ಯೆ
author img

By ETV Bharat Karnataka Team

Published : Nov 13, 2023, 11:03 PM IST

Updated : Nov 14, 2023, 8:03 AM IST

ಕಲಬುರಗಿ: ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್‍ನಲ್ಲಿ ರೈಲ್ವೆ ಇಲಾಖೆ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲ್ವೆ ಜಂಕ್ಷನ್‍ನಲ್ಲಿ ನಡೆದಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಿವಾಸಿ ಮಲ್ಲಿನಾಥ ದೋಶೆಟ್ಟಿ (38) ಆತ್ಮಹತ್ಯೆ ಮಾಡಿಕೊಂಡಿರುವ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಮೃತ ಮಲ್ಲಿನಾಥ ವಾಡಿ ರೈಲ್ವೆಯ ಎಸ್‍ಎನ್‍ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕಳೆದ ಕೆಲ ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿದ್ದ ಮಲ್ಲಿನಾಥ, ಕಾಣೆಯಾಗಿದ್ದಾನೆ ಎಂದು ಪೋಷಕರು ಅ.17 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಭಾನುವಾರ ರಾಯಚೂರು ನಗರದಲ್ಲಿ ವಾಡಿ ಪೊಲೀಸರು ಪತ್ತೆ ಹಚ್ಚಿ ವಾಡಿ ಪೊಲೀಸ್ ಠಾಣೆಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದರು.

ಸೋಮವಾರ ವಾಡಿ ರೈಲ್ವೆ ಪ್ಲಾಟ್ ಫಾರ್ಮ್-1ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ರೈಲ್ವೆ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳೂರು; ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

ಎಎಸ್​ಐ ಆತ್ಮಹತ್ಯೆ(ಹುಬ್ಬಳ್ಳಿ): ಇತ್ತೀಚಿಗೆ, ಎಎಸ್ಐ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕುಂದಗೋಳ ತಾಲೂಕಿನ ಗುಡಿಗೇರಿಯಲ್ಲಿ ನಡೆದಿತ್ತು. ಗುಡಗೇರಿ ಪೊಲೀಸ್ ಠಾಣೆಯ ಎಎಸ್​ಐ ಬಸವರಾಜ ಶಾಂತವೀರಪ್ಪ ಪಾಯಣ್ಣವರ (54) ಆತ್ಮಹತ್ಯೆ ಮಾಡಿಕೊಂಡ ಎಎಸ್ಐ. ರಾತ್ರಿ ಪಾಳಿ ಕೆಲಸ ಮುಗಿಸಿ ವಸತಿ ಗೃಹಕ್ಕೆ ಹೋಗಿದ್ದ ಬಸವರಾಜ, ವಸತಿ ಗೃಹದ ಆವರಣದಲ್ಲಿ ದೇಗುಲದ ಬಳಿ ಮಲಗಿದ್ದರು. ಕುಟುಂಬಸ್ಥರು ಊಟಕ್ಕೆ ಎಬ್ಬಿಸಲು ಹೋದಾಗ ಅವರು ಎದ್ದಿಲ್ಲ. ತಕ್ಷಣ ಕುಟುಂಬಸ್ಥರು ಅವರನ್ನು ಲಕ್ಷೇಶ್ವರ ಆಸ್ಪತ್ರೆಗೆ ಸಾಗಿಸಿದ್ದರು, ಅಷ್ಟೊತ್ತಿಗಾಗಲೇ ಬಸವರಾಜ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಎಎಸ್‌ಐ ಬಸವರಾಜ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗಗೊಂಡಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಎಎಸ್​ಐ ಕೆಲವು ದಿನಗಳಿಂದ ಕಾಲುನೋವಿನಿಂದ ಬಳಲುತ್ತಿದ್ದರು ಎನ್ನಲಾಗಿತ್ತು. ಅನಾರೋಗ್ಯವೇ ಆತ್ಮಹತ್ಯೆಗೆ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಮೃತ ಬಸವರಾಜ ಅವರು ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಶಾಂತಗಿರಿ ಗ್ರಾಮದವರು. ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ. ಈ ಸಂಬಂಧ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..

Last Updated : Nov 14, 2023, 8:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.