ETV Bharat / state

ಆಸ್ತಿಗಾಗಿ ಮಹಿಳೆಗೆ ವಿಷಪ್ರಾಶನ ಮಾಡಿಸಿ ಕೊಲೆಗೈದ ಆರೋಪ.. ಸಂಬಂಧಿಕರ ವಿರುದ್ಧ ಪ್ರಕರಣ ದಾಖಲು - ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಗಲಾಟೆ

ಮನ್ನು ಪವಾರ್, ಶಾಂತಾಬಾಯಿ, ಹಿರಾಸಿಂಗ್, ಭರತ್, ಪ್ರೇಮ, ಕಿರಣ ಎಂಬುವರು ವಿಷಪ್ರಾಶನ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Conflict between two families over inheritance issues
ಮಹಿಳೆಯನ್ನು ಕರೆಯಿಸಿ ವಿಷಪ್ರಾಶನ ಮಾಡಿಸಿದ ಆರೋಪ, ಸಾವು
author img

By

Published : Feb 4, 2022, 4:26 PM IST

Updated : Feb 4, 2022, 4:43 PM IST

ಕಲಬುರಗಿ/ಯಾದಗಿರಿ : ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದು ಸಂಬಂಧಿಕರೇ ಮಹಿಳೆವೊಬ್ಬರಿಗೆ ವಿಷಪ್ರಾಶನ ಮಾಡಿಸಿರುವ ಘಟನೆ ಯಾದಗಿರಿ ತಾಲೂಕಿನ ಆಶನಾಳ ತಾಂಡಾದಲ್ಲಿ ಕಳೆದ ಭಾನುವಾರ ನಡೆದಿದೆ.

ಮಹಿಳೆಯನ್ನು ಕಲಬುರಗಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಹಿಳೆ ಮೃತಪಟ್ಟಿದ್ದಾಳೆ. ಶಾಂತಾಬಾಯಿ ಪವಾರ್ (58) ಎಂಬ ಮಹಿಳೆ ಮೃತಪಟ್ಟವರು. ಆಸ್ತಿ ಕೊಡುವುದಾಗಿ ಆಕೆಯನ್ನು ಕರೆಯಿಸಿ, ವಿಷಪ್ರಾಶನ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಆಸ್ತಿಗಾಗಿ ಮಹಿಳೆಗೆ ವಿಷಪ್ರಾಶನ ಮಾಡಿಸಿ ಕೊಲೆಗೈದ ಆರೋಪ

ಅಸ್ವಸ್ಥ ಶಾಂತಾಬಾಯಿ ಅವರನ್ನ ಕಲಬುರಗಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ನಡುವೆ ಹೋರಾಡ ನಡೆಸಿದ್ದ ಮಹಿಳೆ ಕೊನೆಗೂ ಚಿಕಿತ್ಸೆೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪತ್ನಿ ವಿನಿಮಯ ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ ವಿಡಿಯೋ ಮಾಡಿ ಶೇರ್​ ಮಾಡೋ ಪತಿ!

ಮನ್ನು ಪವಾರ್, ಶಾಂತಾಬಾಯಿ, ಹಿರಾಸಿಂಗ್, ಭರತ್, ಪ್ರೇಮ, ಕಿರಣ ಎಂಬುವರು ವಿಷಪ್ರಾಶನ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 4, 2022, 4:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.