ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಹಾಂತೇಶ ಪಾಟೀಲ್ ಜಾಮೀನಿನ ಮೇಲೆ ಹೊರಬಂದಿದ್ದು, ಕಾಂಗ್ರೆಸ್ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಸೇರಿ ಇತರರು ಮಹಾಂತೇಶ ಪಾಟೀಲ್‌ಗೆ ಸನ್ಮಾನಿಸಿ ಸ್ವಾಗತ ಕೋರಿದ್ದಾರೆ.
ನಿನ್ನೆ ಮಹಾಂತೇಶ ಪಾಟೀಲ್ ಬಿಡುಗಡೆ ಆಗಿ ಮನೆಗೆ ಬಂದಿದ್ದಾರೆ. ಅಲ್ಲಮಪ್ರಭು ಪಾಟೀಲ್ ಒಳಗೊಂಡಂತೆ ನೂರಾರು ಜನ ರಾತ್ರಿಯೇ ಅವರ ಮನೆಗೆ ತೆರಳಿ ಹೂವು ಹಾರಹಾಕಿ, ಸಿಹಿ ತಿನ್ನಿಸುವ ಮೂಲಕ ಸ್ವಾಗತಿಸಿದ್ದಾರೆ.
ಕಳೆದ ಏಪ್ರೀಲ್ 22 ರಂದು ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮಹಾಂತೇಶ ಪಾಟೀಲ್ ಹಾಗೂ ಇವರ ಸಹೋದರ ಆರ್‌ಡಿ ಪಾಟೀಲ್ ಇಬ್ಬರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಎಂಟು ತಿಂಗಳ ನಂತರ ಇದೀಗ ಕಲಬುರಗಿ ಹೈಕೋರ್ಟ್ ಮಹಾಂತೇಶ ಪಾಟೀಲ್‌ಗೆ ಶರತ್ತುಬದ್ದ ಜಾಮೀನು ನೀಡಿದೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷಾ ಅಕ್ರಮ: 'ಆರ್‌ಡಿಪಿ ಬ್ರದರ್ಸ್'ಗೆ ಜಾಮೀನು ಮಂಜೂರು