ETV Bharat / state

ಒತ್ತುವರಿ ತೆರವುಗೊಳಿಸುವಂತೆ ಆಗ್ರಹ: ಆಯುಕ್ತರ ಕಾರಿಗೆ ಘೇರಾವ್ ಹಾಕಿ ಆಕ್ರೋಶ

ನಾಗರಿಕ ಹೋರಾಟ ಸಮಿತಿ ಮತ್ತು ಎಸ್​​​​ಯುಸಿಐ ಸಂಘಟೆಗಳ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮನವಿ ಸ್ವಿಕರಿಸದೆ ಹಾಗೆ ಹೋಗುತ್ತಿದ್ದ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕಾರ್ ಲೋಖಂಡೆ ಅವರ ಕಾರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

author img

By

Published : Mar 16, 2021, 7:39 PM IST

Protest in Kalburgi
ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಕಲಬುರಗಿ: ವಾರ್ಡ್ ಸಂಖ್ಯೆ 55ರ ರಾಘವೇಂದ್ರ ಲೇಔಟ್​​ನ ಉದ್ಯಾನವನ ಜಾಗ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರ ಕಾರು ತಡೆದು ಪ್ರತಿಭಟನೆ ನಡೆಸಲಾಯಿತು.

ಒತ್ತುವರಿ ತೆರವುಗೊಳಿಸುವಂತೆ ಆಗ್ರಹ: ಆಯುಕ್ತರ ಕಾರಿಗೆ ಘೇರಾವ್

ನಾಗರಿಕ ಹೋರಾಟ ಸಮಿತಿ ಮತ್ತು ಎಸ್​ಯುಸಿಐ ಸಂಘಟನೆಗಳ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಮನವಿ ಸ್ವೀಕರಿಸದೆ ಹಾಗೆ ಹೋಗುತ್ತಿದ್ದರು. ಆಯುಕ್ತರ ಈ ಬೇಜಬ್ದಾರಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಆಯುಕ್ತರ ಕಾರಿಗೆ ಘೇರಾವ್ ಹಾಕಿ ಘೋಷಣೆ ಕೂಗಿದರು. ಬಳಿಕ ಕಾರಿನಿಂದ ಕೆಳಗಿಳಿದ ಆಯುಕ್ತರು ಮನವಿ ಸ್ವಿಕರಿಸಿದರು.

ಈ ವೇಳೆ ವಾರ್ಡ್ ಸಂಖ್ಯೆ 55ರ ರಾಘವೇಂದ್ರ ಲೇಔಟ್​​ನ ಉದ್ಯಾನವನ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ತನಿಖೆ ನಡೆಸಿ ಗಾರ್ಡನ್ ಒತ್ತುವರಿ ತೆರವುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.