ಕಲಬುರಗಿ : ರೈಲ್ವೆ ಇಲಾಖೆ ಖಾಸಗೀಕರಣ ವಿರೋಧಿಸಿ ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ ಕೇಂದ್ರ ರೈಲ್ವೆ ನಿಲ್ದಾಣದ ಎದುರು ಪ್ರತಿಭಟಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ರೈಲ್ವೆ ಜನ ಸಾಮಾನ್ಯರ ಆಪ್ತಮಿತ್ರ. ದೇಶದ ಎಲ್ಲ ಜನರಿಗೂ ಸುಲಭ ಸಾರಿಗೆ ವ್ಯವಸ್ಥೆಗೆ ರೈಲು ಕಾರಣವಾಗಿದೆ.
ಇಂತಹ ರೈಲ್ವೆಯನ್ನು ಹಂತಹಂತವಾಗಿ ಖಾಸಗೀಕರಣಕ್ಕೆ ಹುನ್ನಾರ ನಡೆದಿದೆ. ಕೂಡಲೇ ಖಾಸಗೀಕರಣ ನಿರ್ಧಾರವನ್ನು ಕೈಬಿಡಬೇಕು. ಕೆಲವೆಡೆ ಖಾಸಗಿ ರೈಲುಗಳಿಗೆ ಕೊಟ್ಟಿರುವ ಅನುಮತಿ ವಾಪಸ್ ಪಡೆಯಬೇಕು. ರೈಲ್ವೆ ಇಲಾಖೆಯ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.