ಕಲಬುರಗಿ : ಪ್ರಿಯಾಂಕ್ ಖರ್ಗೆ ಅಲ್ಲ ಟ್ವಿಟರ್ ಖರ್ಗೆ ಎಂದಿದ್ದ ಗುತ್ತೇದಾರ್ ಹಾಗೂ ಪ್ರಿಯಾಂಕ್ ಖರ್ಗೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆಂದು ಹೇಳಿದ್ದ ಸಂಸದ ಜಾಧವ್ ಇವರಿಬ್ಬರಿಗೂ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ.
ಇದಕ್ಕಾಗಿ ಈಟಿವಿ ಭಾರತದಲ್ಲಿ ಬಂದಿದ್ದ ಸುದ್ದಿಯ ಲಿಂಕ್‌ನ ಕೂಡ ತಮ್ಮ ಟ್ವಿಟರ್‌ನ ಖಾತೆಯಲ್ಲಿ ಬಳಸಿಕೊಂಡಿದ್ದಾರೆ ಜ್ಯೂನಿಯರ್ ಖರ್ಗೆ. 'ಸರಿ ನನ್ನದು ಗೂಬೆ ಕೂರಿಸುವ ಕೆಲಸ, ನನ್ನ 2 ಪ್ರಶ್ನೆಗಳಿಗೆ ಉತ್ತರ ನೀಡಿ' ಆರೋಗ್ಯ ತಜ್ಞರ ಸಮಿತಿಯ ಶಿಫಾರಸುಗಳು ಪೂರೈಸಲಾಗಿದೆಯಾ? ಹಾಗೂ ಕಲಬುರಗಿ ಡಿಸಿ ವರ್ಗಾವಣೆ ಮಾಡಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.
ಹಾಗೇ ಗುತ್ತೇದಾರ್ ಅವರನ್ನೂ ಬಿಟ್ಟಿಲ್ಲ. 'ನಾನು ನನ್ನ ಅಭಿಪ್ರಾಯಗಳು, ಆಲೋಚನೆಗಳು ಮತ್ತು ನಾನು ಮಾಡಿರುವ ಕಾರ್ಯಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತೇನೆ. ಆದರೆ, ಏನೂ ಕೆಲಸ ಮಾಡದಿದ್ದರೂ ಕೇವಲ ಟ್ವಿಟರ್ ಪೋಸ್ಟ್ ಮಾಡುವ ಕೆಲವು ಜನರ ಪಟ್ಟಿ ಇಲ್ಲಿದೆ' ಎಂದು ಬರೆದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ ಶಾ, ಬಿಜೆಪಿ ರಾಜ್ಯಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಉಮೇಶ ಜಾಧವ್ ಹೆಸರು ಪ್ರಸ್ತಾಪಿಸಿ ಮಾಜಿ ಸಚಿವ ಗುತ್ತೇದಾರ್‌ಗೆ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.