ಕಲಬುರಗಿ : ಮೋದಿ ನೇಣಿಗೇರಲು ಸಿದ್ಧವಾದ್ರೆ ನಾವೇ ರಸ್ತೆ ರೆಡಿ ಮಾಡಿಕೊಡ್ತೆವೆ. ಮೋದಿ ಬಂದು ನೇಣು ಹಾಕಿಕೊಳ್ಳತ್ತಾರಾ? ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚಿಂಚೋಳಿಯ ಶಾದಿಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ನೋಟ್ ಬ್ಯಾನ್ ದಿಂದ ಜನಸಾಮಾನ್ಯರಿಗೆ ಆಗುವ ಎಫೆಕ್ಟ್ 50 ದಿನದಲ್ಲಿ ಸರಿಯಾಗದಿದ್ರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ರು, ಈಗಲೂ ಜನರ ಸಮಸ್ಯೆ ಹಾಗೆ ಇದೆ ಹಾಗಿದ್ರೆ ನಾವು ರಸ್ತೆ ರೆಡಿ ಮಾಡಿಕೊಡಲು ಸಿದ್ದರಿದ್ದೇವೆ
ಮೋದಿ ಬರ್ತಾರಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಇನ್ನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕ್ಷಮೆಗೆ ಆಗ್ರಹಿಸುವ ಮುನ್ನ ಮೋದಿ ಸೇರಿ ಬಿಜೆಪಿ ನಾಯಕರು ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಇತ್ತೀಚಿಗೆ ರಾಜೀವ್ ಗಾಂಧಿ ಅವರ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದಕ್ಕೆ ಮೊದಲು ಕ್ಷಮೆ ಕೇಳಲಿ ಎಂದು ಪರೋಕ್ಷವಾಗಿ ಶೋಭಾ ಕರಂದ್ಲಾಜೆಗೆ ಟಾಂಗ್ ಕೊಟ್ಟರು.
ದೇಶದಲ್ಲಿ ಎರಡಂಕಿಗಿಂತ ಹೆಚ್ಚಿನ ಸೀಟು ಕಾಂಗ್ರೆಸ್ ಗೆ ಬರುವುದಿಲ್ಲ ಎಂದು ಮೋದಿ ಹೇಳಿಕೆಗೆ 40 ಕ್ಕೂ ಅಧಿಕ ಕಾಂಗ್ರೆಸ್ ಸೀಟು ಬಂದರೆ ಪ್ರಧಾನಿ ಮೋದಿ ನೇಣು ಹಾಕಿಕೊಳ್ತಾರ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಜರಿದಿದ್ದರು.
ಇದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಇಂದು ಬೆಳಗ್ಗೆ ತಿರುಗೇಟು ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಅಲ್ಲದೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕೇಸ್ ಹಾಕ್ತಿರೋದಾದ್ರೆ ದಯವಿಟ್ಟು ಮೊದಲು ಹಾಕಿ ಎಂದು ಪ್ರಿಯಾಂಕ್ ಸವಾಲು ಹಾಕಿದ್ದಾರೆ.