ETV Bharat / state

ಕಲಬುರಗಿ: ಮರಳು ಸಾಗಣೆಗೆ ಲಂಚ ಕೇಳಿದ ಪೊಲೀಸರು ಲೋಕಾಯುಕ್ತರ ಬಲೆಗೆ - ಈಟಿವಿ ಭಾರತ ಕನ್ನಡ

ಮರಳು‌ ಸಾಗಾಣಿಕೆಗೆ ಲಂಚ ಕೇಳಿದ ಮೂವರು ಪೊಲೀಸರು ಲೋಕಾಯುಕ್ತ ಪೊಲೀಸರ ಬಲೆ ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

three-police-trapped-by-lokayukta-in-kalaburagi
ಕಲಬುರಗಿ: ಮರಳು ಸಾಗಾಣಿಕೆಗೆ ಲಂಚ ಕೇಳಿದ ಪೊಲೀಸರು ಲೋಕಾಯುಕ್ತರ ಬಲೆಗೆ
author img

By

Published : Sep 23, 2022, 12:24 PM IST

Updated : Sep 23, 2022, 2:23 PM IST

ಕಲಬುರಗಿ: ಮರಳು‌ ಸಾಗಣೆಗೆ ಲಂಚ ಪಡೆಯುತ್ತಿದ್ದ ಮೂವರು ಪೊಲೀಸರು ಲೋಕಾಯುಕ್ತ ಅಧಿಕಾರಿಗಳ ಬಲೆ ಬಿದ್ದಿದ್ದಾರೆ. ಜೇವರ್ಗಿ ಠಾಣೆ ಇನ್ಸ್​ಪೆಕ್ಟರ್ ಹಾಗೂ ಇಬ್ಬರು ಕಾನ್ಸ್​ಟೇಬಲ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇನ್ಸ್​ಪೆಕ್ಟರ್ ಶಿವಪ್ರಸಾದ ಮಠದ, ಜೇವರ್ಗಿ ಎಸ್​​ಪಿ ಬೀಟ್ ಕಾನ್ಸ್​ಟೇಬಲ್ ಶಿವರಾಯ ಅರಳಗುಂಡಗಿ ಹಾಗೂ ಪಿಐ ವಾಹನ ಚಾಲಕ ಅವಣ್ಣ ಲೋಕಾಯುಕ್ತರ ಬಲೆಗೆ ಬಿದ್ದವರು. ಶಹಾಪುರದ ಮರಳು ವ್ಯಾಪಾರಿ ಅಖಿಲ್ ಎಂಬುವರ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ.

ಹಣದ ಸಮೇತ ಪರಾರಿಗೆ ಕಾನ್ಸ್​​​​ಟೇಬಲ್ ಯತ್ನ?: ಮರಳು ವ್ಯಾಪಾರಿ ಅಖಿಲ್ ಅವರ ಬಳಿ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ ಶಿವರಾಯ ಅರಳಗುಂಡಗಿ, ಜೇವರ್ಗಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ವೇಳೆ ಶಿವರಾಯ ಹಣದ ಸಮೇತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗುತ್ತಿದೆ.

ಲೋಕಾಯುಕ್ತರ ದಾಳಿ

ಬಳಿಕ ಲೋಕಾಯುಕ್ತ ಪೊಲೀಸರು ಬೆನ್ನಟ್ಟಿ ಅವರನ್ನು ಬಂಧಿಸಿದ್ದಾರೆ. ಸಿನಿಮೀಯ ರೀತಿಯ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್​​ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ನೆಲಕ್ಕೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಶಿವರಾಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಲಂಚದ ಹಣದಲ್ಲಿ ಇನ್ಸ್​ಪೆಕ್ಟರ್ ಹಾಗೂ ಅವರ ವಾಹನ ಚಾಲಕನ ಪಾಲು ಇರುವುದನ್ನು ಹೇಳಿದ್ದಾನೆ. ಆಗ ಶಿವರಾಯನಿಂದಲೇ ಇನ್ಸ್​ಪೆಕ್ಟರ್​​ಗೆ ಕರೆ ಮಾಡಿಸಿದಾಗ ಹಣ ತೆಗೆದುಕೊಂಡು ಬರುವಂತೆ ಇನ್ಸ್​ಪೆಕ್ಟರ್ ಶಿವಪ್ರಸಾದ್​​ ಹೇಳಿದ್ದಾರೆ‌.‌

ಇದನ್ನೇ ದಾಖಲೆಯಾಗಿ ಇಟ್ಟುಕೊಂಡ ಲೋಕಾಯುಕ್ತ ಅಧಿಕಾರಿಗಳು ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೊರಟಿದ್ದ ಇನ್ಸ್​ಪೆಕ್ಟರ್ ಶಿವಪ್ರಸಾದ್​​ ಹಾಗೂ ಚಾಲಕ ಅವಣ್ಣನನ್ನು ನಂದಿಕೂರ ಬಳಿ‌ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೇವರ್ಗಿಯ ಸರ್ಕಿಟ್ ಹೌಸ್​​ನಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಲಂಚದ ಹಣ ವಾಪಸ್​ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು

Last Updated : Sep 23, 2022, 2:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.