ಕಲಬುರಗಿ: ಲಾಕ್ಡೌನ್ ಸಡಿಲಿಕೆ ಹಿಂಪಡೆದ ಹಿನ್ನೆಲೆ ಅನಗತ್ಯವಾಗಿ ಸುತ್ತಾಡುತ್ತಿದ್ದ ಹಾಗೂ ನಕಲಿ ಪಾಸ್ ಬಳಸಿ ಬೀದಿಗಿಳಿಯುತ್ತಿದ್ದ ಜನರಿಗೆ ಪೊಲೀಸರು ಲಾಠಿ ಬಿಸಿ ತೋರಿಸಿದ ಘಟನೆ ನಗರದ ಸೂಪರ್ ಮಾರುಕಟ್ಟೆ ಹಾಗೂ ಇತರೆಡೆ ನಡೆದಿದೆ.
ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಲಾಕ್ಡೌನ್ನಲ್ಲಿ ನೀಡಲಾಗಿದ್ದ ಸಡಿಲಿಕೆಯನ್ನು ಹಿಂದಕ್ಕೆ ಪಡೆದು, ಅಂಗಡಿ-ಮುಂಗಟ್ಟು ಮುಚ್ಚುವಂತೆ ಜಿಲ್ಲಾಧಿಕಾರಿ ಸಿ.ಬಿ.ಶರತ್ ಆದೇಶ ಹೊರಡಿಸಿದ್ದಾರೆ.
ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಿಗಾ ವಹಿಸಿದ್ದು, ಬೈಕ್ ಸವಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.