ETV Bharat / state

ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರಿಂದ ರೌಡಿಶೀಟರ್​​​​​​ ಕಾಲಿಗೆ ಗುಂಡೇಟು - Rowdy Sheeter

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫಯೀಂನನ್ನು ಬಂಧಿಸಲು ಹೊದಾಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ರೌಡಿಶೀಟರ್​​​​​​ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.

Police gun fired to rowdy sheeter fayeem in Kalaburgi
ಪೊಲೀಸ್ ಬೇಟೆ: ಬೆಳ್ಳಂಬೆಳಗ್ಗೆ ರೌಡಿ ಶೀಟರ್​​​​​​ಗೆ ಗುಂಡೇಟು
author img

By

Published : Aug 29, 2020, 10:42 AM IST

ಕಲಬುರಗಿ: ಕುಖ್ಯಾತ ರೌಡಿಶೀಟರ್​​​ ಫಯೀಂ ಬೇಗ್ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ಫೈರಿಂಗ್ ನಡೆಸಿದ್ದಾರೆ. ಫೈರಿಂಗ್​​​​​ನಲ್ಲಿ ರೌಡಿಶೀಟರ್ ಕಾಲಿಗೆ ಎರಡು ಗುಂಡು ತಾಗಿವೆ.

ಕಲಬುರಗಿ ಹೊರವಲಯದ ಕೆಸರಟಗಿ ಗ್ರಾಮದ ಬಳಿ ಘಟನೆ ನಡೆದಿದ್ದು, ಫಯೀಂ ಬೇಗ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ನಾಲ್ಕೈದು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳಿದ್ದವು. ಹೈದರಾಬಾದ್​​​​ನಲ್ಲಿಯೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫಯೀಂನನ್ನು ಬಂಧಿಸಲು ಹೊದಾಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರಯವ ಪೊಲೀಸರು

ಈ ವೇಳೆ ಇನ್ಸ್​ಪೆಕ್ಟರ್​​ ಲಾಲಸಾಬ ಗೌಂಡಿ ಗುಂಡು ಹಾರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಹೆಡ್ ಕಾನ್ಸ್​​​​ಸ್ಟೇಬಲ್​​​​​ ಅಂಬಾದಾಸ ಮತ್ತು ಕಾನ್ಸ್​ಟೇಬಲ್​ ರಫೀಕ್​ಗೆ ಗಾಯಗಳಾಗಿದ್ದು, ಅವರನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಫಯೀಂನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Police gun fired to rowdy sheeter fayeem in Kalaburgi
ರೌಡಿಶೀಟರ್​ ಫಯೀಂ ಬೇಗ್​​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.