ಸೇಡಂ: ಲಾರಿ ಬ್ಯಾಟರಿ ಮತ್ತು ಇನ್ನಿತರೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎಂ.ಡಿ. ಸಮೀರ ತಂದೆ ಹನೀಫ್ ಮತ್ತು ಆಟೋ ಚಾಲಕ ಯಲ್ಲಾಲಿಂಗ ಬೀರಪ್ಪ ಪೂಜಾರಿ ಬಂಧಿತ ಆರೋಪಿಗಳು. ಇವರು ತಾಲೂಕಿನ ವಿವಿದೆಡೆ ನಿಲ್ಲಿಸಿದ್ದ ಲಾರಿಗಳ ಬ್ಯಾಟರಿ ಮತ್ತು ಸ್ಟೋನ್ ಪಾಲಿಶಿಂಗ್ ಮಷಿನಿನ್ನ ಬ್ಲೇಡ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಪಡೆದ ಸೇಡಂ ಪೊಲೀಸರು, ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ 50 ಸಾವಿರ ಮೌಲ್ಯದ ಆಟೋ, 11 ಸಾವಿರ ಮೌಲ್ಯದ ಲಾರಿ ಬ್ಯಾಟರಿ ಮತ್ತು ಸ್ಟೋನ್ ಕಟಿಂಗ್ ಬ್ಲೇಡ್, ಒಂದು ಹೋಂಡಾ ಶೈನ್ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ವಿಠ್ಠಲರೆಡ್ಡಿ, ಜಗದೀಶ, ಶ್ರೀನಿವಾಸರೆಡ್ಡಿ, ಅಲ್ಲಾಬಕ್ಷ್, ನಿಂಗಪ್ಪ ಪಾಲ್ಗೊಂಡಿದ್ದರು.