ಕಲಬುರಗಿ: ಯುಗಾದಿ ಹಬ್ಬದ ಹಿನ್ನಲೆ ಬಿಸಿಲೂರು ಕಲಬುರಗಿಯಲ್ಲಿ ಹಬ್ಬದ ಸಾಮಗ್ರಿ ಖರೀದಿ ಜೋರಾಗಿದೆ. ನಗರದ ಮಾರ್ಕೆಟ್ಗಳಲ್ಲಿ ಜನ ಮುಗಿಬಿದ್ದಿದ್ದಾರೆ. ನಗರದ ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ಎಂ. ಎಸ್. ಕೆ ಮಿಲ್ ಸೇರಿದಂತೆ ನಗರದ ಹಲವು ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಖರೀದಿ ಭರದಿಂದ ಸಾಗಿದೆ.
ಕೋವಿಡ್ ಅಲೆಯ ಆರ್ಭಟದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಯುಗಾದಿ ಹಬ್ಬದ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಲಾಗಿತ್ತು. ಈ ವರ್ಷ ಕೊರೊನಾ ಆರ್ಭಟ ತಣ್ಣಗಾದ ಹಿನ್ನಲೆ ಜಿಲ್ಲಾದ್ಯಂತ ಹಬ್ಬದ ಸಡಗರ ಸಂಭ್ರಮ ಕಳೆಗಟ್ಟಿದೆ. ಯುಗಾದಿ ಹಬ್ಬದಂದೇ ಬೆಲೆ ಏರಿಕೆ ಬಿಸಿ ಗ್ರಾಹಕರ ಕೈ ಸುಡುವಂತೆ ಮಾಡಿದೆ. ಹೂವು, ಹಣ್ಣು, ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.
ಬೆಲೆ ಏರಿಕೆ ಬಿಸಿ: ಹಣ್ಣುಗಳಲ್ಲಿ 15 ರಿಂದ 20 ರೂಪಾಯಿ ಏರಿಕೆ ಆಗಿದ್ದರೆ, ಹೂವುಗಳಲ್ಲಿ ಸುಮಾರು 20 ರಿಂದ 25 ಹಾಗೂ 30 ರೂಪಾಯಿ ಹೆಚ್ಚಳವಾಗಿದೆ. ಒಂದು ಕಡೆ ಬೆಲೆ ಏರಿಕೆ ಇನ್ನೊಂದು ಕಡೆ ಬಿರುಬಿಸಿಲಿನ ನಡುವೆಯೂ ಸಾರ್ವಜನಿಕರು ಹಬ್ಬ ಆಚರಣೆಗೆ ಉತ್ಸುಕರಾಗಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದವು.
ಓದಿ: ಕಾಪೋರೇಟ್ ಹಿಡಿತದಲ್ಲಿ ಭಾರತದ ಮಾಧ್ಯಮ ನರಳುತ್ತಿದೆ: ಪಿ. ಸಾಯಿನಾಥ್