ಕಲಬುರಗಿ: ಜಾತ್ರೆ ವೇಳೆ ಸಿಡಿಮದ್ದು ಸಿಡಿದು 20ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ. ಇದರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮರಗಮ್ಮ ದೇವಿ ಜಾತ್ರೆ ಹಾಗೂ ಈ ಹಿಂದೆ ಭಗ್ನವಾದ 15 ದೇವಿಗಳ ಮೂರ್ತಿ ಮರುಪ್ರತಿಷ್ಠಾಪನೆಯನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾತ್ರೆಯಲ್ಲಿ ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಗುತಿತ್ತು. ಆಕಾಶದತ್ತ ಮದ್ದು ಸಿಡಿಸಿದಾಗ ಬೆಂಕಿಯ ಕಿಡಿ ಪಕ್ಕದಲ್ಲಿಯೇ ಇದ್ದ ಅಧಿಕ ಪ್ರಮಾಣದ ಮದ್ದಿನ ಮೇಲೆ ಬಿದ್ದು ಅವಘಡ ನಡೆದಿದೆ.
ಅಂದಾಜು ಐದು ಕೆಜಿಯಷ್ಟಿದ್ದ ಸಿಡಿಮದ್ದು ಸಿಡಿದಾಗ ಹಲವರು ಗಾಯಗೊಂಡರು. ಮದ್ದು ಸಿಡಿಸುವ ವ್ಯಕ್ತಿ, ಓರ್ವ ಮಗು ಸೇರಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಹಲವರ ದೇಹದ ಅಂಗಾಂಗಗಳು ಸುಟ್ಟಿದ್ದು, ಗ್ರಾಮಸ್ಥರು ಕಾರುಗಳ ಮುಖಾಂತರ ಅವರನ್ನು ಸ್ಥಳೀಯ ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ವಿದ್ಯುತ್ ತಂತಿ ಮೇಲೆ ಬುದ್ಧಿಮಾಂದ್ಯನ ಸ್ಟಂಟ್... ವ್ಯಕ್ತಿಯ ರಕ್ಷಣೆಗೆ ಪೊಲೀಸರು, ಸ್ಥಳೀಯರ ಹರಸಾಹಸ