ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಿಂಗ್ಪಿನ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಜ್ಯೋತಿ ಪಾಟೀಲ್ ಎಂಬುವಳೆ ಬಂಧಿತ ಆರೋಪಿಯಾಗಿದ್ದಾಳೆ.
ಜ್ಯೋತಿ ಅಭ್ಯರ್ಥಿ ಶಾಂತಿಬಾಯಿ ಅಕ್ರಮದಿಂದ ನೇರವಾಗಿ ಆಯ್ಕೆಯಾಗಲು ನೆರವಾಗಿದ್ದಳು ಎನ್ನಲಾಗಿದೆ. ಪಿಎಸ್ಐ ನೇಮಕಾತಿ ಅಕ್ರಮ ಪಟ್ಟಿಯಲ್ಲಿ ಹೆಸರು ಹೊಂದಿರುವ ಶಾಂತಿಬಾಯಿ ಸದ್ಯ ನಾಪತ್ತೆಯಾಗಿದ್ದಾಳೆ. ತಲೆಮರೆಸಿಕೊಂಡಿರುವ ಇನ್ನೊಬ್ಬ ಕಿಂಗ್ಪಿನ್ ಇಂಜಿನಿಯರ್ ಮಂಜುನಾಥ್ ಪಾಟೀಲ್ಗೆ ಶಾಂತಿಬಾಯಿಯನ್ನು ಭೇಟಿ ಮಾಡಿಸಿರುವುದು ಕೂಡ ಆರೋಪಿ ಜ್ಯೋತಿ ಪಾಟೀಲ್ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿ ನೋಟಿಸ್ಗೆ ಲಿಖಿತ ಉತ್ತರ ನೀಡಿದ ಪ್ರಿಯಾಂಕ್ ಖರ್ಗೆ
ಮಂಜುನಾಥ್ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಜ್ಯೋತಿ ಪಾಟೀಲ್, ಈ ಮೊದಲು ಬೆಂಗಳೂರಿನ ಆರ್ಡಿಪಿಆರ್ನಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ತಿಂಗಳ ಹಿಂದೆಯಷ್ಟೇ ಶಹಾಬಾದ್ ನಗರಸಭೆಗೆ ವರ್ಗಾವಣೆಯಾಗಿದ್ದಳು. ಸದ್ಯ ಆರೋಪಿಗಳಾದ ಶಾಂತಿಬಾಯಿ, ಮಂಜುನಾಥ್ ನಾಪತ್ತೆಯಾಗಿದ್ದು, ಇಬ್ಬರ ನಡುವಿನ ಮಧ್ಯವರ್ತಿ ಜ್ಯೋತಿ ಪಾಟೀಲ್ ಸಿಐಡಿ ಬಲೆಗೆ ಬಿದ್ದಿದ್ದಾಳೆ.
ಇದನ್ನೂ ಓದಿ: ಪೊಲೀಸರಿಗೆ ಶರಣಾಗುವಂತೆ ಆರೋಪಿ ದಿವ್ಯಾ ಹಾಗರಗಿಗೆ ಎಚ್ಚರಿಕೆ ನೀಡಿದ ಗೃಹ ಸಚಿವ