ETV Bharat / state

ಬಹಮನಿ ಕೋಟೆಯೊಳಗಿನ ಮನೆಗಳ ತೆರವಿಗೆ ಸೂಚನೆ: ನಿವಾಸಿಗಳಿಂದ ಪ್ರತಿಭಟನೆ

ಐತಿಹಾಸಿಕ ಬಹಮನಿ ಕೋಟೆಯೊಳಗಿನ ಮನೆಗಳ ತೆರವಿಗೆ ಸೂಚನೆ ನೀಡಲಾಗಿದೆ. ಈ ಕ್ರಮದಿಂದಾಗಿ ಸುಮಾರು 280 ನಿವಾಸಿಗಳು ಅತಂತ್ರಗೊಳ್ಳಲಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಕೋಟೆಯೊಳಗಿನ ಮನೆಗಳ ತೆರವುಗೊಳಿಸದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಗ್ರಹಿಸಲಾಯಿತು.

author img

By

Published : Feb 22, 2020, 5:33 PM IST

Notice of evacuation of houses within Bahamani Fort....Protest!
ಬಹಮನಿ ಕೋಟೆಯೊಳಗಿನ ಮನೆಗಳ ತೆರವಿಗೆ ಸೂಚನೆ....ನಿವಾಸಿಗಳಿಂದ ಪ್ರತಿಭಟನೆ!

ಕಲಬುರಗಿ: ಐತಿಹಾಸಿಕ ಬಹಮನಿ ಕೋಟೆಯೊಳಗಿನ ಮನೆಗಳ ತೆರವಿಗೆ ಸೂಚನೆ ನೀಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾಧಿಕಾರಿ, ಅಲ್ಲಿನ ನಿವಾಸಿಗಳಿಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಿ, ಇಲ್ಲದಿದ್ದಲ್ಲಿ ಸರ್ಕಾರವೇ ತೆರವುಗೊಳಿಸಲಿದೆ. ಅದರ ವೆಚ್ಚವನ್ನು ನಿವಾಸಿಗಳೇ ಭರಿಸಬೇಕಾಗುತ್ತದೆ ಎಂದು ಸೂಚಿಸಿದ್ದಾರೆ. ಪರಿಣಾಮ ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಮಾಡಲಾಗುತ್ತಿದೆ ಎಂದು ಆರೋಪಿಸಿ ಸೂಪರ್ ಮಾರುಕಟ್ಟೆಯ ಚೌಕ್​ನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ

ಜಿಲ್ಲಾಡಳಿತದ ಈ ಕ್ರಮದಿಂದಾಗಿ ಸುಮಾರು 280 ನಿವಾಸಿಗಳು ಅತಂತ್ರಗೊಳ್ಳಲಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಕೋಟೆಯೊಳಗಿನ ಮನೆಗಳನ್ನು ತೆರವುಗೊಳಿಸದಂತೆ ಆಗ್ರಹಿಸಿದರು. ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ತೆರವುಗೊಳಿಸುವುದಿಲ್ಲವೆಂದು ಎಚ್ಚರಿಕೆಯನ್ನೂ ಸಹ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.